ಪೌರಕಾರ್ಮಿಕರೊಂದಿಗೆ ಊಟ ಮಾಡಿದ ಡಿ.ಸಿ.

ಶುಕ್ರವಾರ, ಮಾರ್ಚ್ 22, 2019
31 °C

ಪೌರಕಾರ್ಮಿಕರೊಂದಿಗೆ ಊಟ ಮಾಡಿದ ಡಿ.ಸಿ.

Published:
Updated:
Prajavani

ಹೊಸಪೇಟೆ: ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಸೋಮವಾರ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಪೌರ ಕಾರ್ಮಿಕರೊಂದಿಗೆ ಊಟ ಮಾಡಿದರು.

ಮೊದಲಿಗೆ ಜಿಲ್ಲಾಧಿಕಾರಿಯವರು ಪೌರ ಕಾರ್ಮಿಕರಿಗೆ ಆಹಾರ ಬಡಿಸಿದರು. ನಂತರ ಅವರೊಂದಿಗೆ ಊಟ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಹಂಪಿ ಉತ್ಸವದ ಯಶಸ್ಸಿನಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ದೊಡ್ಡದಿದೆ. ಉತ್ಸವದ ಸಂದರ್ಭದಲ್ಲಿ ಸಹಸ್ರಾರು ಜನ ಹಂಪಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ವಚ್ಛತೆಗೆ ಹಗಲಿರುಳು ಶ್ರಮಿಸಿದ್ದಾರೆ. ಅವರಿಂದಾಗಿ ಇಡೀ ಹಂಪಿ ಪರಿಸರದಲ್ಲಿ ಅಸ್ವಚ್ಛತೆ ಇರಲಿಲ್ಲ. ಜಿಲ್ಲಾ ಆಡಳಿತ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ’ ಎಂದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಗರಸಭೆ ಪೌರಾಯುಕ್ತ ವಿ. ರಮೇಶ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !