ಗಾಯಗೊಂಡವರಿಗೆ ಚಿಕಿತ್ಸೆ, ಪರಿಹಾರಕ್ಕೆ ಆಗ್ರಹ

7

ಗಾಯಗೊಂಡವರಿಗೆ ಚಿಕಿತ್ಸೆ, ಪರಿಹಾರಕ್ಕೆ ಆಗ್ರಹ

Published:
Updated:
Deccan Herald

ಹೊಸಪೇಟೆ: ಇಲ್ಲಿನ ಚಿತ್ತವಾಡ್ಗಿಯಲ್ಲಿ ಇತ್ತೀಚೆಗೆ ಪೀರಲ ಮೆರವಣಿಗೆ ವೇಳೆ ಕಟ್ಟಡ ಕುಸಿದು ಗಾಯಗೊಂಡವರಿಗೆ ಜಿಲ್ಲಾ ಆಡಳಿತ ಸೂಕ್ತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿ.ವೈ.ಎಫ್‌.ಐ.)ನಿಂದ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಲೋಕಸಭೆ ಉಪಚುನಾವಣೆಯಿಂದ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಗಾಯಗೊಂಡವರೊಂದಿಗೆ ಫೆಡರೇಶನ್‌ ಕಾರ್ಯಕರ್ತರು ಚಿತ್ತವಾಡ್ಗಿಯಲ್ಲಿ ಪ್ರತಿಭಟಿಸಿದರು.

ಫೆಡರೇಶನ್‌ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಮಾತನಾಡಿ, ‘ಕಟ್ಟಡ ಕುಸಿದು ಬಾಲಕಿ ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಘಟನೆ ನಡೆದ ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಲಾಗಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಅದನ್ನು ಜಿಲ್ಲಾಡಳಿತ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಗಾಯಗೊಂಡ ಎಲ್ಲರಿಗೂ ಜಿಲ್ಲಾಡಳಿತದಿಂದ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು. ಜತೆಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ. ಭಾಗೀರಥಿ, ಡಾ. ಸಲೀಂ, ಡಿ.ವೈ.ಎಸ್‌.ಪಿ. ಕೆ. ಶಿವಾರೆಡ್ಡಿ, ಸ್ಥಳೀಯರಾದ ಕೆ.ಎಂ. ಸಂತೋಷ್‌ ಕುಮಾರ್‌, ಕಲ್ಯಾಣಯ್ಯ, ಕಿನ್ನಾಳ್‌ ಹನುಮಂತ, ಇ. ಮಂಜುನಾಥ, ಬಂಡೆ ತಿರುಕಪ್ಪ, ಕೆ. ರಮೇಶ್‌, ರಾಜಚಂದ್ರಶೇಖರ್‌, ಹನುಮ ನಾಯ್ಕ, ಶಿವುಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !