ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಆಧಾರ್‌‘ ಕೇಂದ್ರಗಳ ಸಂಖ್ಯೆ ಹೆಚ್ಚಳಕ್ಕೆ ಆಗ್ರಹ

Last Updated 17 ಜೂನ್ 2019, 12:11 IST
ಅಕ್ಷರ ಗಾತ್ರ

ಹೊಸಪೇಟೆ: ’ಆಧಾರ್‌‘ ಗುರುತಿನ ಕಾರ್ಡ್‌ ಮಾಡಿಸುವ ಕೇಂದ್ರಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

’ಆಧಾರ್‌‘ ನೋಂದಣಿ ಮಾಡಿಸುವ ಕೇಂದ್ರಗಳ ಸಂಖ್ಯೆ ನಗರದಲ್ಲಿ ಬಹಳ ಕಡಿಮೆ ಇದೆ. ಯಾವಾಗಲೂ ಸರ್ವರ್‌ ಡೌನ್‌ ಇರುವುದರಿಂದ ಸಾರ್ವಜನಿಕರಿಗೆ ಬಹಳ ಅನಾನುಕೂಲವಾಗುತ್ತಿದೆ. ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಪಡಿತರ ವಿಷಯದಲ್ಲೂ ಹೀಗೆ ಆಗುತ್ತಿದೆ. ಆಧಾರ್‌, ಪಡಿತರ ಕಾರ್ಡ್‌ ಸಿಗದೇ ಇರುವುದರಿಂದ ಜನ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಡ ಮಕ್ಕಳಿಗೆ ಶಿಷ್ಯವೇತನ ಸಿಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಶಾಲೆ ಹಾಗೂ ಪಂಚಾಯಿತಿಯಲ್ಲಿ ಆಧಾರ್‌, ಪಡಿತರ ಚೀಟಿಗೆ ನೋಂದಣಿ ಮಾಡಿಸುವ ವ್ಯವಸ್ಥೆ ಕಲ್ಪಿಸಿದರೆ ಬಹಳ ಪ್ರಯೋಜನವಾಗುತ್ತದೆ ಎಂದು ಸಲಹೆ ಮಾಡಿದ್ದಾರೆ.

ವೇದಿಕೆಯತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್.ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಎಸ್.ಎಂ.ಜಾಫರ್, ಮುಖಂಡರಾದ ಅಮೀರ್ ಖಾನ್, ಅಮರೇಶ್, ರುದ್ರಪ್ಪ, ರಘು, ಶಿವಪ್ಪ, ವಿರೂಪಾಕ್ಷಿ, ಫೈರೋಜ್, ಮೊಹಮ್ಮದ್, ಹಮೀದುಲ್ಲಾ, ಮಂಜು, ಜೋಶಿ, ವ್ಯಾಸ, ಭೀಮಪ್ಪ, ಕೊಟ್ರೇಶಿ, ಗಂಗಾಧರ, ಶ್ರೀನಿವಾಸ ಶೆಟ್ಟಿ, ಪ್ರಕಾಶ್, ಶಿವಪ್ಪ ತಾರಿಹಳ್ಳಿ, ವಲಿಬಾಷ, ಖಾಜಾ, ಮೈನುದ್ದೀನ್, ಶಮಾ, ಸುಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT