’ಪಂಚಾಯಿತಿ ಕೆಳಹಂತದ ನೌಕರರ ಸಂಬಳ ಹೆಚ್ಚಿಸಿ‘

ಶುಕ್ರವಾರ, ಜೂಲೈ 19, 2019
24 °C

’ಪಂಚಾಯಿತಿ ಕೆಳಹಂತದ ನೌಕರರ ಸಂಬಳ ಹೆಚ್ಚಿಸಿ‘

Published:
Updated:
Prajavani

ಹೊಸಪೇಟೆ: ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಮಟ್ಟದ ಸಮಾವೇಶ ಭಾನುವಾರ ನಗರದಲ್ಲಿ ಜರುಗಿತು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ’ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜವಾನರು, ಪಂಪ್‌ ಆಪರೇಟರ್‌ಗಳು, ಬಿಲ್‌ ಕಲೆಕ್ಟರ್‌ಗಳು ಸೇರಿದಂತೆ ಕೆಳಹಂತದ ಎಲ್ಲ ಸಿಬ್ಬಂದಿಯನ್ನು ನೌಕರರೆಂದು ಮಾನ್ಯ ಮಾಡಿ, ಅವರಿಗೆ ಅಗತ್ಯ ಸರ್ಕಾರಿ ಸವಲತ್ತು ಕಲ್ಪಿಸಿಕೊಡಬೇಕು‘ ಎಂದರು.

’ನೌಕರರು ಕಡಿಮೆ ಸಂಬಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕುಟುಂಬ ನಡೆಸುವುದು ಕಷ್ಟವಾಗುತ್ತಿದೆ. ಅವರ ವೇತನ ಹೆಚ್ಚಿಸಬೇಕು. ಕರ ವಸೂಲಿಯಲ್ಲಿ ಶೇ 40ರಷ್ಟು ಹಣ ವೇತನ ಪಾವತಿಸಲು ಮೀಸಲಿಡಬೇಕು. ಇದರಿಂದ ಸಕಾಲಕ್ಕೆ ಸಂಬಳ ಕೊಡಲು ಸಾಧ್ಯವಾಗುತ್ತದೆ‘ ಎಂದು ಹೇಳಿದರು.

ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷ ಭಾಸ್ಕರ್‌ ರೆಡ್ಡಿ, ‘ಪಂಚಾಯಿತಿ ನೌಕರರಿಗೆ ನಿವೃತ್ತಿ ವೇತನ, ಗಳಿಕೆ ರಜೆ, ವೈದ್ಯಕೀಯ ವೆಚ್ಚ, ವಾರಕ್ಕೊಮ್ಮೆ ವೇತನ ಸಹಿತ ರಜೆ ಕೊಡಬೇಕು‘ ಎಂದು ಆಗ್ರಹಿಸಿದರು.

ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗೌಡ, ತಾಲ್ಲೂಕು ಕಾರ್ಯದರ್ಶಿ ಶಿವು ಮೆಟ್ರಿ, ಸಿ.ಐ.ಟಿ.ಯು. ಮುಖಂಡರಾದ ನಾಗರತ್ನಮ್ಮ, ಜಡೆಯ್ಯ ಸ್ವಾಮಿ, ಜೆ.ಪ್ರಕಾಶ್, ನೌಕರರ ಸಂಘದ ಹೊಸಪೇಟೆ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಮರಿಸ್ವಾಮಿ ಹಂಪಿ, ಬಿ.ನಾಗರಾಜ, ಯೋಗೇಶ್ ಮಲಪನಗುಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !