ಬಸ್‌ ವೇಳಾಪಟ್ಟಿ ನಾಮಫಲಕಕ್ಕೆ ಆಗ್ರಹ

7

ಬಸ್‌ ವೇಳಾಪಟ್ಟಿ ನಾಮಫಲಕಕ್ಕೆ ಆಗ್ರಹ

Published:
Updated:
Deccan Herald

ಹೊಸಪೇಟೆ: ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಳ ವೇಳಾಪಟ್ಟಿ ನಾಮಫಲಕ ಅಳವಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಆಗ್ರಹಿಸಿದೆ.

ಈ ಸಂಬಂಧ ವೇದಿಕೆಯ ಪದಾಧಿಕಾರಿಗಳು ಗುರುವಾರ ಬಸ್‌ ನಿಲ್ದಾಣದ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ನಂತರ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮೊಹಮ್ಮದ್‌ ಫೈಜ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆ ಸರಿಯಾಗಿದೆ. ಆದರೆ, ಯಾವ ಬಸ್ಸು, ಯಾವ ಊರಿಗೆ, ಯಾವ ಸಮಯಕ್ಕೆ ಹೋಗುತ್ತದೆ ಎಂಬ ಮಾಹಿತಿ ಇಲ್ಲ. ಕೆಲವೊಂದು ಕಡೆ ಇದ್ದರೂ ಅವುಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ದೊಡ್ಡ ಅಕ್ಷರಗಳಲ್ಲಿ ಬರೆಸಬೇಕು. ರಾತ್ರಿಯಿಡೀ ಈ ನಿಲ್ದಾಣದ ಮೂಲಕ ಬಸ್ಸುಗಳು ಓಡಾಡುವುದರಿಂದ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಎಸ್.ಎಂ. ಜಾಫರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !