‘ಕಾಕುಬಾಳು ಗ್ರಾಮ ಲೆಕ್ಕಿಗನ ಬದಲಿಸಿ’

7

‘ಕಾಕುಬಾಳು ಗ್ರಾಮ ಲೆಕ್ಕಿಗನ ಬದಲಿಸಿ’

Published:
Updated:
Deccan Herald

ಹೊಸಪೇಟೆ: ಸರಿಯಾಗಿ ಕೆಲಸ ನಿರ್ವಹಿಸದ ತಾಲ್ಲೂಕಿನ ಕಾಕುಬಾಳು ಗ್ರಾಮದ ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಜರುಗಿಸುವಂತೆ ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.

ಅವರು ಈ ಸಂಬಂಧ ಸೋಮವಾರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

‘ಗ್ರಾಮ ಲೆಕ್ಕಿಗರು ರೈತರು, ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಾರಕ್ಕೆ ಕನಿಷ್ಠ ಎರಡು ದಿನಗಳಾದರೂ ಗ್ರಾಮಕ್ಕೆ ಭೇಟಿ ಕೊಡಬೇಕು. ಆದರೆ, ಆರು ತಿಂಗಳಾದರೂ ಗ್ರಾಮಕ್ಕೆ ಬಂದಿಲ್ಲ. ಇದರಿಂದಾಗಿ ಯಾವುದೇ ಕಡತಗಳು ವಿಲೇವಾರಿ ಆಗುತ್ತಿಲ್ಲ. ಅನೇಕ ತಿಂಗಳುಗಳಿಂದ ಸಾರ್ವಜನಿಕರು, ರೈತರ ಕೆಲಸಗಳು ಆಗುತ್ತಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಈಗಿರುವ ಗ್ರಾಮ ಲೆಕ್ಕಿಗರನ್ನು ಕೂಡಲೇ ಬದಲಿಸಬೇಕು. ರೈತರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸೂಕ್ತ ಗ್ರಾಮ ಲೆಕ್ಕಿಗರನ್ನು ನೇಮಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪಂಚಾಯಿತಿ ಸದಸ್ಯರಾದ ವಿ. ರಾಮಕೃಷ್ಣ, ಲಕ್ಷ್ಮಿ, ಹನುಮಂತಮ್ಮ, ಹುಲಿಗೆಮ್ಮ, ಕೆ.ಡಿ.ಪಿ. ಸದಸ್ಯರಾದ ಭೀಮಪ್ಪ, ಎಸ್‌.ಎಸ್‌. ಗೌಡ, ರೈತ ಮುಖಂಡ ಎಂ. ಜಡೆಪ್ಪ ದೂರಿನ ಪ್ರತಿಗೆ ಸಹಿ ಮಾಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !