ಮದ್ಯದ ಅಂಗಡಿ ಸ್ಥಳಾಂತರಿಸಲು ಆಗ್ರಹ

ಶನಿವಾರ, ಜೂಲೈ 20, 2019
26 °C

ಮದ್ಯದ ಅಂಗಡಿ ಸ್ಥಳಾಂತರಿಸಲು ಆಗ್ರಹ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ನಾಗೇನಹಳ್ಳಿಯಲ್ಲಿರುವ ಮದ್ಯದ ಅಂಗಡಿಯನ್ನು ಗ್ರಾಮದಿಂದ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೇ ನಂ. 24/ಸಿ ಕೃಷಿ ಜಮೀನಿನಲ್ಲಿ ಮದ್ಯದಂಗಡಿ ತೆರೆಯಲಾಗಿದೆ. ಅಲ್ಲಿಂದ ನೂರು ಮೀಟರ್‌ ದೂರದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಕೃಷಿ ಕೂಲಿ ಕಾರ್ಮಿಕರು ನಿತ್ಯ ಅದೇ ಮಾರ್ಗದಲ್ಲಿ ಓಡಾಡುತ್ತಾರೆ. ದಿನವಿಡೀ ಗಳಿಸಿದ ಹಣವನ್ನು ಕೆಲವರು ಮದ್ಯ ಕುಡಿಯಲು ವ್ಯಯಿಸುತ್ತಿದ್ದಾರೆ. ಅವರ ಕುಟುಂಬ ಬೀದಿಗೆ ಬಂದಿವೆ. ಕೂಡಲೇ ಅದನ್ನು ಸ್ಥಳಾಂತರಿಸಬೇಕು ಎಂದು ಅಬಕಾರಿ ಇನ್‌ಸ್ಪೆಕ್ಟರ್‌ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಮದ್ಯ ಕುಡಿದು ಕೆಲವರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇಡೀ ಗ್ರಾಮದ ವಾತಾವರಣ ಹಾಳಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು‘ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಬಸವರಾಜ, ಗ್ರಾಮಸ್ಥರಾದ ಬಿ.ಚಂದ್ರಶೇಖರ್, ಡಿ.ಚನ್ನಪ್ಪ, ಎಸ್.ಕಳಕಪ್ಪ, ಎನ್.ಬಸವರಾಜ, ಕೆ.ಸೋಮಶೇಖರ್, ಚಂದ್ರಪ್ಪ, ಬಿ.ನೀಲಪ್ಪ, ರಾಘವೇಂದ್ರ ಟಿ.ಆರ್. ಎರ್ರಿಸ್ವಾಮಿ, ಟಿ.ಆರ್. ಕೆ. ಕುಮಾರಪ್ಪ, ಜಿ.ಗಂಗಪ್ಪ, ಕೆ.ಕುಮಾರಪ್ಪ ಮನವಿಗೆ ಸಹಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !