ಬಿಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ

ಸೋಮವಾರ, ಏಪ್ರಿಲ್ 22, 2019
32 °C

ಬಿಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ

Published:
Updated:
Prajavani

ಕಾನಹೊಸಹಳ್ಳಿ: ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಮಂಗಳವಾರ ಇಲ್ಲಿನ ಹುಡೇಂ ಗ್ರಾಮದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ತೆರೆದ ವಾಹನದಲ್ಲಿ ಗ್ರಾಮದಲ್ಲಿ ಸಂಚರಿಸಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

‘ನಾನು ಜಿಲ್ಲೆಯ ಬಡ ರೈತನ ಮಗ. ನನಗೆ ಅಧಿಕಾರದ ಆಸೆ ಇಲ್ಲ. ಅಭಿವೃದ್ದಿ ಕನಸು ಹೊಂದಿರುವ ಈ ಬಾರಿ ನನ್ನನು ಗೆಲ್ಲಿಸಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಯುವಕರು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಅವರಿಗೆ ಶಕ್ತಿ ನೀಡಲು ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ನನ್ನನ್ನು ಗೆಲ್ಲಿಸಿದರೆ ಅವರಿಗೆ ಶಕ್ತಿ ನೀಡಿದಂತಾಗುತ್ತದೆ’ ಎಂದರು.

ಶಾಸಕ ಎನ್.ವೈ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ರೇವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಬಿ. ಬಸವರಾಜ್, ಹುಡೇಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಮುಖಂಡರಾದ ರಾಮಲಿಂಗಪ್ಪ, ಹುಡೇಂ ಪಾಪನಾಯಕ, ದೀನಾ ಮಂಜುನಾಥ, ಕೋಡಿಹಳ್ಳಿ ಭೀಮಪ್ಪ, ಬಂಗಾರಿ ಹನುಮಂತು, ಜಿ.ಟಿ.ಮಲ್ಲಿಕಾರ್ಜುನ ಗೌಡ, ರಾಮದುರ್ಗ ಪಾಪಣ್ಣ, ಕೆ.ಎಂ.ತಿಪ್ಪೇಸ್ವಾಮಿ, ಹುಲಿಕೆರೆ ಗೀತಾ, ಪ್ರಮೀಳಾಬಾಯಿ, ಮಂಡಲ ಅಧ್ಯಕ್ಷ ವೀರನಗೌಡ, ಎಕ್ಕಗೊಂದಿ ನಾಗರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !