ಶನಿವಾರ, ಸೆಪ್ಟೆಂಬರ್ 21, 2019
24 °C

‘ರಾಜ್ಯದಾದ್ಯಂತ ಧರ್ಮ ಜಾಗೃತಿ ಕಾರ್ಯಕ್ರಮ’

Published:
Updated:

ಹೊಸಪೇಟೆ: ‘ವಿವಿಧ ಮಠಾಧೀಶರ ಸಹಕಾರದೊಂದಿಗೆ ರಾಜ್ಯದಾದ್ಯಂತ ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದರು.

ಯಾದಗಿರಿಯಲ್ಲಿ ಹಮ್ಮಿಕೊಂಡಿರುವ ಭಗವತಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವಾಗ ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬರುವ ದಿನಗಳಲ್ಲಿ ಹಂಪಿ ಸುತ್ತಮುತ್ತಲಿನ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ಕೆಲವೇ ವರ್ಷಗಳಲ್ಲಿ ಕೃಷ್ಣನ ಪರ್ಯಾಯ ಪೂಜೆ ಬರಲಿದೆ. ಎಲ್ಲೆಡೆ ಸಂಚಾರ ಕೈಗೊಂಡು ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಲಾಗುವುದು’ ಎಂದು ಹೇಳಿದರು.

ವಿಷ್ಣು ಸಹಸ್ರನಾಮ ಸಂಘಟನೆ ರಘುಪತಿ ಭಟ್, ಕೃಷ್ಣ ಮಠದ ವ್ಯವಸ್ಥಾಪಕ ಹಯವದನ ಗೊಗ್ಗಿ ಇದ್ದರು.

Post Comments (+)