ಹಂಪಿ ಶೈಲಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ!

7
ಹಸಿರು ಕಟ್ಟಡದ ಮಾದರಿ: ಆ.15ರಂದು ಶಂಕು ಸ್ಥಾಪನೆಗೆ ಭರದ ಸಿದ್ಧತೆ

ಹಂಪಿ ಶೈಲಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ!

Published:
Updated:

ಬಳ್ಳಾರಿ:  ಹಸಿರು ಕಟ್ಟಡದ ಪರಿಕಲ್ಪನೆ ಮತ್ತು ಹಂಪಿ ಸ್ಮಾರಕಗಳ ಶೈಲಿಯಲ್ಲಿ ನಗರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಲಿದ್ದು, ಸ್ವಾತಂತ್ರ್ಯೋತ್ಸವ ದಿನ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಶಂಕು ಸ್ಥಾಪನೆ ಮಾಡಲಿದ್ದಾರೆ. ಕರ್ನಾಟಕ ಗೃಹ ಮಂಡಳಿಯು ಭವನವನ್ನು ನಿರ್ಮಿಸಲಿದೆ.

ನಗರದ ಸರ್ಕಾರಿ ಅತಿಥಿ ಗೃಹದ ಸಮೀಪದಲ್ಲೇ ಈ ಭವನ ನಿರ್ಮಾಣಗೊಳ್ಳಲಿದ್ದು, ಒಂದೇ ಸೂರಿನಡಿ ನಲವತ್ತು ಇಲಾಖೆಗಳು ಕಾರ್ಯನಿರ್ವಹಿಸಲಿವೆ. ವಿವಿಧ ಪ್ರದೇಶಗಳಲ್ಲಿರುವ ಕಚೇರಿಗಳಿಗೆ ಅಲೆದಾಡುವ ಜನರ ಕಷ್ಟವೂ ಬಗೆಹರಿಯಲಿದೆ.

ನೆಲಮಹಡಿ ಸೇರಿದಂತೆ ಮೂರು ಮಹಡಿಗಳಲ್ಲಿ ಮೈದಾಳಲಿರವ ಭವನದಲ್ಲಿ ಸಭಾಂಗಣವೂ ಇರಲಿದೆ. ಲಿಫ್ಟ್‌ಗಳು, ಅಗ್ನಿಶಾಮಕ ವ್ಯವಸ್ಥೆ, ಸಿ.ಸಿ ಕ್ಯಾಮೆರಾ, ಲ್ಯಾನ್ ವ್ಯವಸ್ಥೆ, ಸ್ವಯಂಚಾಲಿತ ಸೌರ ವಿದ್ಯುತ್ ದೀಪಗಳ ಸೌಲಭ್ಯವೂ ಭವನದಲ್ಲಿ ಇರಲಿದೆ.

ಸೊಬಗು: ‘ಹಂಪಿಯ ಸ್ಮಾರಕಗಳ ಸೊಬಗನ್ನು ಸಾರುವ ರೀತಿಯಲ್ಲಿ ಕಚೇರಿಯ ಹೊರಾಂಗಣ ಮತ್ತು ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಮೇಲ್ಭಾಗದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಪ್ರತಿರೂಪ ಸೃಷ್ಟಿಸುವ ನೀಲನಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ತಿಳಿಸಿದ್ದಾರೆ.

‘ಹೊರಾಂಗಣ ಪೂರ್ಣ ಲೋಟಸ್ ಮಹಲ್ ಮಾದರಿಯಲ್ಲಿದ್ದು, ಮುಂಭಾಗವದಲ್ಲಿ ವಿಶಾಲ ಉದ್ಯಾನವನ, ನೀರಿನ ಕಾರಂಜಿ ನಿರ್ಮಿಸಲಾಗುವುದು’ ಎಂದಿದ್ದಾರೆ.

15ರಂದು ಬೆಳಿಗ್ಗೆ 7.15ಕ್ಕೆ ಅತಿಥಿ ಗೃಹದ ಆವರಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಜಿ.ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ,

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !