ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘಕ್ಕೆ ದಿವಾಕರ್‌ ಅಧ್ಯಕ್ಷ

ಮಂಗಳವಾರ, ಏಪ್ರಿಲ್ 23, 2019
32 °C

ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘಕ್ಕೆ ದಿವಾಕರ್‌ ಅಧ್ಯಕ್ಷ

Published:
Updated:
Prajavani

ಹೊಸಪೇಟೆ: ತಾಲ್ಲೂಕು ಬ್ರಾಹ್ಮಣ ಸಂಘದ ನೂತನ ಅಧ್ಯಕ್ಷರಾಗಿ ಕೆ. ದಿವಾಕರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಗರದ ಕೋಟೆ ಶಂಕರಲಿಂಗ ದೇವಸ್ಥಾನದಲ್ಲಿ ನಡೆದ ಸಂಘದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ದಿವಾಕರ್‌ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಂತರ ಈ ಹಿಂದಿನ ಅಧ್ಯಕ್ಷ ಕೆ. ಹನುಮಂತ ರಾವ್‌ ಅವರು ಹೊಸ ಅಧ್ಯಕ್ಷರನ್ನು ಗೌರವಿಸಿ, ಅಧಿಕಾರ ಹಸ್ತಾಂತರಿಸಿದರು.

ಇದೇ ವೇಳೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ.ಎಸ್‌. ಗುರುರಾಜ ರಾವ್‌, ಕೆ. ಪ್ರಭಾಕರ ರಾವ್‌, ಶ್ರೀಪಾದ್‌ ಪೂಜಾರ್‌, ಮುದ್ಲಾಪುರ ನಾಗರಾಜ ರಾವ್‌ (ಉಪಾಧ್ಯಕ್ಷರು), ವೇಣುಗೋಪಾಲ ವೈದ್ಯ ಕೋಟೆ (ಪ್ರಧಾನ ಕಾರ್ಯದರ್ಶಿ), ಶ್ರೀಕಾಂತ ಅಗ್ನಿಹೋತ್ರಿ (ಕೋಶಾಧ್ಯಕ್ಷ), ರಮೇಶ ಪುರೋಹಿತ (ಕೋಶಾಧಿಕಾರಿ), ಶ್ರೀಧರ ಆಚಾರ ಮತ್ತು ವಿನಾಯಕ (ಮರಿಯಮ್ಮನಹಳ್ಳಿ ಸಂಚಾಲಕರು), ಸತ್ಯನಾರಾಯಣ ರಾವ್‌ ಮತ್ತು ಸುಬ್ಬಾರಾವ್‌ (ಕಮಲಾಪುರ ಘಟಕದ ಸಂಚಾಲಕರು),  ಮಾಲ್ಲಾರಿ ದೀಕ್ಷಿತ್, ಡಬ್ಲ್ಯೂ.ಎಲ್. ಪ್ರಸಾದ್, ಬಿ. ರಘುಪತಿ, ಕೆ. ಎಸ್. ಕೃಷ್ಣಮೂರ್ತಿ, ಮುದ್ಲಾಪುರ ಶಂಕರ, ಕೆ. ಕಿರಣ ಕುಮಾರ್, ಎಂ. ಕೆ. ಗುರುರಾಜ, ಯಶವಂತ ಸಾನಬಾಳ, ಗುರು ಪ್ರಸಾದ ಕಡ್ಲಬಾಳು, ರವಿ ದೇಶಪಾಂಡೆ (ಸದಸ್ಯರು).

ಸಮಾಜದ ಮುಖಂಡರಾದ ಸಿನಂ ಭಟ್ಟ, ವೇಣುಗೋಪಾಲ ವೈದ್ಯ, ಹರಿಹರ ಭಟ್ಟ, ಕಲ್ಲಂ ಭಟ್ಟ, ಕೃಷ್ಣ ಮೂರ್ತಿ, ಎಂ.ಕೆ. ಗುರುರಾಜ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !