’ಬಾಲ್ಯ ವಿವಾಹಕ್ಕೆ ಅವಕಾಶ ಮಾಡದಿರಿ‘

ಶನಿವಾರ, ಜೂಲೈ 20, 2019
26 °C

’ಬಾಲ್ಯ ವಿವಾಹಕ್ಕೆ ಅವಕಾಶ ಮಾಡದಿರಿ‘

Published:
Updated:
Prajavani

ಹೊಸಪೇಟೆ: ಬಾಲ್ಯ ವಿವಾಹ ತಡೆ ಕಾಯ್ದೆ, ಪೋಷಣ ಅಭಿಯಾನ ಇಲ್ಲಿನ ಚಪ್ಪರದಹಳ್ಳಿಯಲ್ಲಿ ಶನಿವಾರ ನಡೆಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್ ಮಾತನಾಡಿ, ’ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭೀಣಿಯರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ ಸೇವೆಯೂ ಕಲ್ಪಿಸಿದೆ. ಅವುಗಳ ಪ್ರಯೋಜನ ಪಡೆದುಕೊಂಡು ಆರೋಗ್ಯವಂತರಾಗಿ ಇರಬೇಕು‘ ಎಂದು ತಿಳಿಸಿದರು.

’18 ವರ್ಷ ತುಂಬದವರಿಗೆ ಯಾವುದೇ ಕಾರಣಕ್ಕೂ ವಿವಾಹ ಮಾಡಬಾರದು. ಇದು ಪೋಷಕರು, ಸಮುದಾಯದವರ ಜವಾಬ್ದಾರಿ ‘ ಎಂದು ಹೇಳಿದರು.

ಬಡಾವಣೆ ಠಾಣೆಯ ಎ.ಎಸ್‌.ಐ. ಮುನಿರತ್ನಂ, ’ಬಾಲ್ಯವಿವಾಹ, ಹೆಣ್ಣು ಮಕ್ಕಳು ನಾಪತ್ತೆಯಾದರೆ ತಕ್ಷಣವೇ ಠಾಣೆಗೆ ಬಂದು ದೂರು ಕೊಡಬೇಕು. ಹೀಗೆ ಮಾಡಿದರೆ ಬೇಗ ಪ್ರಕರಣ ಭೇದಿಸಬಹುದು‘ ಎಂದರು.

ನಗರಸಭೆ ಮಾಜಿ ಸದಸ್ಯರಾದ ಟಿ. ಚಿದಾನಂದಪ್ಪ, ಗೌಸ್‌, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆ ನಾಗಪ್ಪ, ಡಾನ್‌ ಬಾಸ್ಕೊ ಸಂಸ್ಥೆಯ ಚಿದಾನಂದ, ಕೃಷ್ಣ, ಚನ್ನಮ್ಮ, ಅನುಪಮ, ಅಂಗನವಾಡಿ ಕಾರ್ಯಕರ್ತೆಯರಾದ, ಚಂದ್ರಕಲಾ, ಲಕ್ಷ್ಮಿ, ನಸ್ರಿನ್, ನೇತ್ರಾ, ಅಂಜಲಿ ಬೆಳಗಲ್‌, ಆದಿನಾರಾಯಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !