ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನ ಕಬ್ಬಿಣದ ಕಡಲೆಯಲ್ಲ’

Last Updated 14 ಸೆಪ್ಟೆಂಬರ್ 2019, 13:58 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿಜ್ಞಾನ ವಿಷಯ ಬಹಳ ಜಟಿಲವಾದುದು ಎಂಬ ಭಾವನೆ ಅನೇಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ಆ ಧೋರಣೆ ಬದಲಿಸುವ ಹೊಣೆಗಾರಿಕೆ ಪ್ರಾಧ್ಯಾಪಕರ ಮೇಲಿದೆ’ ಎಂದುವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಕೆ.ಎಚ್‌. ಶಿವಪ್ರಸಾದ್‌ ಹೇಳಿದರು.

ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪುನರ್‌ ಮನನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲ ವಿಜ್ಞಾನ ವಿಷಯಗಳನ್ನು ಹೆಚ್ಚು ಹೆಚ್ಚು ಪ್ರಚಲಿತಗೊಳಿಸುವ ಹೊಣೆ ಇಂದಿನ ಅಧ್ಯಾಪಕರ ಮೇಲಿದೆ.ಪದವಿಯಲ್ಲಿ ವಿಜ್ಞಾನ ವಿಷಯಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳುವವರೇ ವಿರಳ. ಕಾರಣ ಕಷ್ಟದಾಯಕವೆಂಬ ಕಲ್ಪನೆಯೇ ಬೇರೂರಿರುತ್ತದೆ. ಇಂತಹ ವಿಷಯಗಳನ್ನು ಸುಲಭೊಗೊಳಿಸಿ ವಿದ್ಯಾರ್ಥಿಗಳಿಗೆ ಇಷ್ಟವಾಗುವಂತೆ ಬೋಧಿಸುವ ಕಲೆಗಾರಿಕೆಯನ್ನು ಅಧ್ಯಾಪಕರು ರೂಢಿಸಿಕೊಳ್ಳಬೇಕು‘ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ, ಪ್ರಾಧ್ಯಾಪಕರಾದ ಎಸ್.ಡಿ. ಮಂಜುಳಾ, ಪ್ರಭುಗೌಡ,ಟಿ.ಎಚ್‌. ಬಸವರಾಜ, ನಾಗಣ್ಣ ಕಿಲಾರಿ, ಬಿ. ನಾಗಾರ್ಜುನ, ನಿಜಾಮುದ್ದೀನ್ ತರುಣ್, ರಮ್ಯಾ, ರಂಜಿತಾ, ಸೌಮ್ಯಶ್ರೀ, ಪಲ್ಲವಿ, ಸೃಷ್ಟಿ ಪೌಲ್, ಪ್ರಶಾಂತ್, ಮೇಘನಾ, ಎಂ.ಕೆ.ಗದ್ದಿಗೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT