ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ –150ರ ರಂಗಪಯಣ: ರಂಗರೂಪಕ ಪ್ರದರ್ಶನ 27ರಿಂದ

Last Updated 21 ಡಿಸೆಂಬರ್ 2018, 9:18 IST
ಅಕ್ಷರ ಗಾತ್ರ

ಬಳ್ಳಾರಿ: ಮಹಾತ್ಮಾ ಗಾಂಧೀಜಿಯ 150ನೇ ಜನ್ಮವರ್ಷಾಚರಣೆ ಪ್ರಯುಕ್ತ ಗಾಂಧಿ 150ರ ರಂಗಪಯಣ ‘ಪಾಪು ಗಾಂಧಿ-ಗಾಂಧಿ ಬಾಪು ಆದ ಕಥೆ’ಯ ರಂಗರೂಪಕ ಪ್ರದರ್ಶನ ಜಿಲ್ಲೆಯಲ್ಲಿ ಡಿ.27ರಿಂದ ಆರಂಭವಾಗಲಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ 28 ಪ್ರದರ್ಶನಗಳು ನಡೆಯಲಿವೆ.

ವಿವರ: 27 ಮತ್ತು 28ರಂದು ಹಡಗಲಿ ತಾಲೂಕಿನ ರಂಗಭಾರತಿ ರಂಗಮಂದಿರ, ಗಾಂಧಿ ಅಧ್ಯಯನ ಕೇಂದ್ರ ಹಾಗೂ ಮೊರಾರ್ಜಿ ವಸತಿ ಶಾಲೆ. 29 ಮತ್ತು 30ರಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಮುದಾಯ ರಂಗಮಂದಿರ, ರಾಷ್ಟ್ರೋತ್ಥಾನ ಸ್ಕೂಲ್ ಮತ್ತು ಕಾಲೇಜು, ಕೋಗಳಿ ಬಯಲು ರಂಗಮಂದಿರ.

ಡಿ.31 ಮತ್ತು ಜ.1ರಂದು ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಪದವಿ ಪೂರ್ವ ಕಾಲೇಜು, ಕಾನಾಮಡಗು ಬಿ.ಇಡಿ ಕಾಲೇಜು, ತಿಮ್ಮಲಾಪುರ ಮೊರಾರ್ಜಿ ವಸತಿ ಶಾಲೆ, ಕೂಡ್ಲಿಗಿ ಪಟ್ಟಣದ ಆಂಜಿನೇಯ ರಂಗಮಂದಿರ.

ಜ.2 ಮತ್ತು 3ರಂದು ಸಂಡೂರು ತಾಲೂಕಿನ ಸಂಡೂರು ಪಿಯು ಕಾಲೇಜು, ಬಂಡ್ರಿ ವಸತಿ ಶಾಲೆ, ಚೋರನೂರು ಮತ್ತು ಸುಶೀಲಾ ನಗರ, ಜ.5 ಮತ್ತು 6ರಂದು ಹೊಸಪೇಟೆ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ದುರ್ಗದಾಸ ರಂಗಮಂದಿರ, ವಿನಾಯಕ ಸ್ಕೂಲ್ ಮತ್ತು ಕಾಲೇಜು, ಶರೀಫ್ ರಂಗಮಂದಿರ.

ಜ.8 ಮತ್ತು 9ರಂದ ಬಳ್ಳಾರಿ ತಾಲೂಕಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ನಗರದ ಬಯಲು ರಂಗಮಂದಿರ, ಕುರುಗೋಡು ಸರ್ಕಾರಿ ಪದವಿಪೂರ್ವ ಕಾಲೇಜು,ಯರ್ರಂಗಳಿ ವಸತಿ ಶಾಲೆ, ಜ.11 ಮತ್ತು 12ರಂದು ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ವಸತಿ ಶಾಲೆ, ಸಿರಿಗೇರಿ, ಸಿರಗುಪ್ಪ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆ.

ಸಭೆ: ಈ ಸಂಬಂಧ ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್‌, ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಕನ್ನಡ –ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರದರ್ಶನ ನಡೆಯಲಿದೆ. ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮವಾಗಿರುವುದರಿಂದ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಹಾಗೂ ಕಾರ್ಯಕ್ರಮದ ಜಿಲ್ಲಾ ಸಂಘಟಕ ಅಣ್ಣಾಜಿ ಕೃಷ್ಣಾರೆಡ್ಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT