ಕುಡಿವ ನೀರಿನ ಘಟಕಕ್ಕೆ ಭೂಮಿಪೂಜೆ

7

ಕುಡಿವ ನೀರಿನ ಘಟಕಕ್ಕೆ ಭೂಮಿಪೂಜೆ

Published:
Updated:

ಹೊಸಪೇಟೆ: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಬಸವರಾಜ ಅವರು ಭೂಮಿ ಪೂಜೆ ನೆರವೇರಿಸಿದರು.

‘ಶಾಸಕ ಆನಂದ್‌ ಸಿಂಗ್‌ ಅವರ ₹10 ಲಕ್ಷ ಅನುದಾನದಲ್ಲಿ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಹೊಸೂರು ಸುತ್ತಮುತ್ತಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಇದರ ಮುಖ್ಯ ಉದ್ದೇಶ. ಶುದ್ಧ ನೀರು ಕುಡಿದರೆ ಎಲ್ಲರೂ ಆರೋಗ್ಯವಾಗಿ ಇರಬಹುದು. ಇದರ ಕುರಿತು ಅನೇಕ ಸಲ ಶಾಸಕರೊಂದಿಗೆ ಚರ್ಚಿಸಿದ್ದೆ. ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೆ. ಈಗ ಒಂದು ಹಂತಕ್ಕೆ ಬಂದಿದೆ’ ಎಂದು ನಾಗವೇಣಿ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಎನ್.ಹುಲಿಗೆಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದುರುಗಮ್ಮ, ಮುಖಂಡರಾದ ಸುದರ್ಶನ ನಾಯ್ಕ, ಕಿಚಡಿ ಲಕ್ಷ್ಮಣ, ಇಪ್ಪಿತೇರಿ ಮಂಜುನಾಥ, ಬಾಣದ ಗಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎ. ಸೂಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !