ಜಿಲ್ಲಾ ವಕೀಲರ ಸಂಘಕ್ಕೆ ಶಾಂತಿಯುತ ಮತದಾನ: 13ಕ್ಕೆ ಮತ ಎಣಿಕೆ

7

ಜಿಲ್ಲಾ ವಕೀಲರ ಸಂಘಕ್ಕೆ ಶಾಂತಿಯುತ ಮತದಾನ: 13ಕ್ಕೆ ಮತ ಎಣಿಕೆ

Published:
Updated:
Deccan Herald

ಬಳ್ಳಾರಿ: ಇಲ್ಲಿನ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಸಂಘದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 5 ರವರೆಗೆ ಶಾಂತಿಯುತ ಮತದಾನ ನಡೆಯಿತು.

1998 ರಿಂದ 2001ರವರೆಗೆ ಪದಾಧಿಕಾರಿಗಳ ಅವಿರೋಧ ಆಯ್ಕೆಯ ನಡೆಯುತ್ತಿತ್ತು. ನಂತರ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ (ಮಹಿಳೆಗೆ ಮೀಸಲು) ಹಾಗೂ 10 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು.

ಹಿರಿಯ ವಕೀಲರಾದ ಎನ್.ತಿಪ್ಪಣ್ಣ, ಉಡೇದ ಬಸವರಾಜ, ಕೋಟೇಶ್ವರರಾವ್, ಜನಾರ್ದನ, ಜೆ.ಎಸ್.ಬಸವರಾಜ, ಪಾಂಡು, ಕೆ.ಎಂ. ಮಹೇಶ್ವರಯ್ಯ, ಎನ್.ಅಯ್ಯಪ್ಪ, ಕೆ.ನಾಗಭೂಷಣರಾವ್ ಮತದಾನ ಮಾಡಿದರು. ಸಂಘದ 15 ಪದಾಧಿಕಾರಿಗಳ ಸ್ಥಾನಕ್ಕೆ 35ಕ್ಕೂ ಹೆಚ್ಚು ಆಕಾಂಕ್ಷಿಗಳು ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ.ಅಂಕಲಯ್ಯ, ಡಿ.ಎಸ್.ಬದ್ರಿನಾಥ ಮತ್ತು ಚಂದ್ರಶೇಖರರೆಡ್ಡಿ ಸ್ಪರ್ಧಿಸಿದ್ದಾರೆ.

ಎಣಿಕೆ ಇಂದು: ಮತ ಎಣಿಕೆ ಕಾರ್ಯ 13ರಂದು ಬೆಳಿಗ್ಗೆ 9 ಗಂಟೆಗೆ ಸಂಘದ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !