ಲೋಕಸಭಾ ಚುನಾವಣೆ–2019: ಕರಡು ಮತದಾರರ ಪಟ್ಟಿ ಪ್ರಕಟ, ಆಕ್ಷೇಪಣೆಗೆ ಡಿ.20ರ ಗಡುವು

7

ಲೋಕಸಭಾ ಚುನಾವಣೆ–2019: ಕರಡು ಮತದಾರರ ಪಟ್ಟಿ ಪ್ರಕಟ, ಆಕ್ಷೇಪಣೆಗೆ ಡಿ.20ರ ಗಡುವು

Published:
Updated:
Deccan Herald

ಬಳ್ಳಾರಿ : 2019ರಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದರೆ ಡಿ.20ರವರೆಗೆ ಸಲ್ಲಿಸಬಹುದು. ಡಿ.31ರೊಳಗೆ ವಿಲೇವಾರಿ ಮಾಡಿ, 2019ರ ಜ.15ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈವರೆಗೆ 19,15,556 ಮತದಾರರು ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ 19,11,614 ಮತದಾರರು ಭಾವಚಿತ್ರದೊಂದಿಗೆ ನೋಂದಾಯಿಸಿದ್ದಾರೆ ಎಂದು ತಿಳಿಸಿದರು. 

ಪ್ರತಿ ಬೂತ್‍ ಮಟ್ಟದ ಅಧಿಕಾರಿಗಳಿಗೆ ಸೂಚಸಲಾಗಿದ್ದು, ಫಾರಂ 6, 7, 8 ಮತ್ತು 8ಎ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಹೆಸರು ಸೇರ್ಪಡೆ, ಸ್ಥಳಾಂತರ, ತಿದ್ದುಪಡಿ ಕುರಿತು ಸಮಸ್ಯೆಗಳಿದ್ದರೇ ಜಿಲ್ಲಾಮಟ್ಟದ ಸಹಾಯವಾಣಿ 1077 ಮತ್ತು ತಾಲೂಕು ಕೇಂದ್ರಗಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ನಾಡ ಕಚೇರಿಗಳಲ್ಲಿಯೂ ಕೂಡ ಅರ್ಜಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರವಾರು ನೋಂದಣಿ ವಿವರ : ಹೂವಿನಹಡಗಲಿ 1,82,552 ಹಗರಿಬೊಮ್ಮನಹಳ್ಳಿ 2,21,503, ವಿಜಯನಗರ 2,28,923, ಕಂಪ್ಲಿ 2,13,350, ಸಿರಗುಪ್ಪ 2,02,836, ಬಳ್ಳಾರಿ ಗ್ರಾಮೀಣ 2,19,226, ಬಳ್ಳಾರಿ ನಗರ 2,33,295, ಸಂಡೂರು 2,15,178, ಕೂಡ್ಲಿಗಿ 1,98,693 ಮತದಾರರು ನೋಂದಾಯಿಸಿಕೊಂಡಿದ್ದಾರೆ.

ಚುನಾವಣಾ ತಹಸೀಲ್ದಾರ್ ಹಲೀಮಾ ಇದ್ದರು.

2019 ಜ.1ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಜನತೆ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಜಿಲ್ಲೆಯಾದ್ಯಂತ ನ.17ರಂದು ಮತದಾರರ ಪಟ್ಟಿ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ 

ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !