ಹೊಸಪೇಟೆ: ಸ್ಥಿರಾ ಸಂಸ್ಥೆ ಬಳ್ಳಾರಿ ಹಾಗೂ ವಾತ್ಸಲ್ಯ ಟ್ರಸ್ಟ್ ಸಹಭಾಗಿತ್ವದಲ್ಲಿ ಭಾನುವಾರ ನಗರದ ಅನಂತಶಯನಗುಡಿಯಲ್ಲಿ ಹಮ್ಮಿಕೊಂಡಿದ್ದ ಗೃಹ ಉದ್ಯಮ, ಕರಕುಶಲ ವಸ್ತುಗಳ ಪ್ರದರ್ಶನ ಕಣ್ಮನ ಸೆಳೆಯಿತು.
ಉಪ್ಪಿನ ಕಾಯಿ, ಕಿರು ಒಣತಿಂಡಿ, ಕೈಚೀಲ, ಸಂಸ್ಕರಿಸಿ ಕೃಷಿ ಉತ್ಪನ್ನ, ರೊಟ್ಟಿ, ಬತ್ತಿ, ಹೋಳಿಗೆ, ಸಿರಿಧಾನ್ಯಗಳು, ಚರ್ಮವಾದ್ಯಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಹಳೆ ಮಲಪನಗುಡಿಯ ಕುರಿ ಉಣ್ಣೆ ಉತ್ಪನ್ನ, ಚೈತನ್ಯ ಸಂಘ, ಮಹಿಳಾ ಉಪ ಸಮಿತಿ ಗೃಹ ಉತ್ಪನ್ನ, ರೇಣುಕಾ ಗ್ರಾಮೀಣಾಭಿವೃದ್ಧಿ ಕೇಂದ್ರ ಮಹಿಳಾ ಗೃಹೋದ್ಯಮಿ ಉತ್ಪನ್ನಗಳು, ವಾತ್ಸಲ್ಯ ಟ್ರಸ್ಟ್ ಶಾಲಾ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ಇರಿಸಲಾಗಿತ್ತು.
ಹಳೆ ಮಲಪನಗುಡಿಯ ಕುರಿ ಉಣ್ಣೆ ಉತ್ಪನ್ನದ ಸುಭದ್ರಮ್ಮ ಕಾರಮಂಚಪ್ಪ ಉದ್ಘಾಟಿಸಿದರು. ಸ್ಥಿರಾ ಸಂಸ್ಥೆಯ ಬಿ. ರೇಣುಕಾ, ಸಾವಿತ್ರಮ್ಮ, ರಾಜೇಶ್ವರಿ, ಮಲ್ಲಮ್ಮ, ಭಾಗ್ಯ, ವಾತ್ಸಲ್ಯ ಟ್ರಸ್ಟ್‌ನ ಯಶಸ್ವಿನಿ, ವೆಂಕಾಪುರ ಕ್ಯಾಂಪ್ ರಾಮದೇವಿ, ರೇಣುಕಾ ಗ್ರಾಮೀಣಾಭಿವೃದ್ಧಿ ಕೇಂದ್ರದ ಪ್ರೇಮಾ, ಸರಸ್ವತಿ, ಉಮಾದೇವಿ, ಗೀತಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.