ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಯಿಂದ ರೊಟ್ಟಿ, ಹೋಳಿಗೆ

ಬಾಳೆಗೆ ಬೆಂಬಲ ಬೆಲೆ ಸಿಗದಿದ್ದಾಗ ರೈತನಿಗೆ ಹೊಳೆದ ಉಪಾಯ
Last Updated 7 ಡಿಸೆಂಬರ್ 2021, 13:57 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಕಷ್ಟಪಟ್ಟು ಬೆಳೆದ ಬಾಳೆಗೆ ಸೂಕ್ತ ಬೆಂಬಲ ಸಿಗದಿದ್ದಾಗ ಅದರಿಂದ ರೊಟ್ಟಿ, ಹೋಳಿಗೆ ತಯಾರಿಸಿ ಮಾರುಕಟ್ಟೆ ಕಂಡುಕೊಂಡಿದ್ದಾರೆ ತಾಲ್ಲೂಕಿನ ಕಮಲಾಪುರದ ಹಳ್ಳಿಕೆರೆಯ ರೈತ ಜೆ.ಎನ್‌. ಕಾಳಿದಾಸ್‌.

ಕಟಾವು ಮಾಡಿದ ಬಾಳೆಯನ್ನು ಮೂರು ದಿನಕ್ಕೂ ಹೆಚ್ಚು ಸಮಯ ಇಟ್ಟುಕೊಳ್ಳಲು ಆಗುವುದಿಲ್ಲ. ಆದರೆ, ಬಾಳೆಯನ್ನು ಮೂರು ತಿಂಗಳವರೆಗೂ ಬಾಳಿಕೆ ಬರುವಂತೆ ಹಿಟ್ಟು ತಯಾರಿಸಿ ರೊಟ್ಟಿ, ಹೋಳಿಗೆ ತಯಾರಿಸುತ್ತಿದ್ದಾರೆ.

‘ಬಾಳೆಕಾಯಿಯನ್ನು ಕತ್ತರಿಸಿ ಆರು ದಿನಗಳ ಕಾಲ ಒಣಗಿಸಿ ನಂತರ ಹಿಟ್ಟಾಗಿಸಿ ಅದರಿಂದ ರೊಟ್ಟಿ, ಹೋಳಿಗೆ, ಚಕ್ಕುಲಿ ತಯಾರಿಸಲಾಗುತ್ತದೆ. ಸುಗಂಧಿ, ಯಾಲಕ್ಕಿ ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಬಾಳೆಹಣ್ಣನ್ನು ಒಣಗಿಸಿ ಹಿಟ್ಟು ಮಾಡಿ 90ಕ್ಕೂ ಹೆಚ್ಚು ಖಾದ್ಯ ತಯಾರಿಸಬಹುದು’ ಎಂದು ಕಾಳಿದಾಸ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಬಾಳೆಯಿಂದ ತಯಾರಾದ ಹಿಟ್ಟು ಮೂರು ತಿಂಗಳವರೆಗೂ ಬಾಳಿಕೆಗೆ ಬರುತ್ತದೆ. ಎಂಟು ಕೆ.ಜಿ ಬಾಳೆಯಿಂದ 1 ಕೆ.ಜಿ ಹಿಟ್ಟು ತಯಾರಿಸಬಹುದು. ಒಂದು ಕೆ.ಜಿ ಹಿಟ್ಟಿನಿಂದ 16 ರಿಂದ 17 ರೊಟ್ಟಿ ಮಾಡಬಹುದು. ಮಧುಮೇಹಿಗಳಿಗೆ ಈ ರೊಟ್ಟಿ ಉತ್ತಮ. ಈಗಾಗಲೇ ರಾಯಚೂರು ವಿಶ್ವವಿದ್ಯಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಹಿಟ್ಟಿನಿಂದ ಹೆಚ್ಚಿನ ಪೌಷ್ಟಿಕಾಂಶ ಲಭಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ಈಗಷ್ಟೇ ಬಾಳೆಯಿಂದ ರೊಟ್ಟಿ, ಹೋಳಿಗೆ ತಯಾರಿಸಲಾಗುತ್ತಿದೆ. ಬರುವ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸುವ ಯೋಜನೆ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT