ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದಾನ: ಕಾಲುವೆ ಹೂಳೆತ್ತಿದ್ದ ಡಣಾಯಕನಕರೆ ಅಚ್ಚುಕಟ್ಟು ಪ್ರದೇಶದ ರೈತರು

ಕಾಲುವೆ ರಿಪೇರಿ ಮಾಡದ ಅಧಿಕಾರಿಗಳು: ಆರೋಪ
Last Updated 21 ಜುಲೈ 2021, 3:58 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಸಮೀಪದ ಡಣಾಯಕನಕರೆ ಅಚ್ಚುಕಟ್ಟು ಪ್ರದೇಶದ ನೂರಕ್ಕೂ ಹೆಚ್ಚು ರೈತರು ಸೋಮವಾರ ಶ್ರಮದಾನ ಮಾಡಿ ಕೆರೆಯಿಂದ ನೀರು ಹರಿಯುವ ಕಾಲುವೆಗಳಲ್ಲಿನ ಹೂಳು ಹಾಗೂ ಪೊದೆಗಳನ್ನು ತೆಗೆದರು.

ಜಿಲ್ಲೆಯ ಎರಡನೇ ಅತಿದೊಡ್ಡ ಕೆರೆಯಾದ ಡಣಾಯಕನಕರೆ ಸುಮಾರು 2ಸಾವಿರ ಎಕರೆ ಅಚ್ಟುಕಟ್ಟು ಪ್ರದೇಶ ಹೊಂದಿದ್ದು, ರೈತರು ಭತ್ತದ ಸಸಿಗಳನ್ನು ನಾಟಿ ಮಾಡಲು ಅಣಿಯಾಗಿದ್ದಾರೆ. ಬಹುತೇಕ ಕಾಲುವೆಗಳು ಹೂಳೂ, ಗಿಡಗಂಟೆಗಳಿಂದ ತುಂಬಿರುವುದರಿಂದ ಹಾಗೂ ಅಲ್ಲಲ್ಲಿ ಕಾಲುವೆ ಕಟ್ಟಡಗಳು ಹಾಳಾಗಿರುವುದರಿಂದ ಕೆಳಹಂತದ ಗದ್ದೆಗಳಿಗೆ ನೀರು ಹರಿಯದಂತಾಗಿದೆ. ರೈತರೇ ಶ್ರಮದಾನದ ಮೂಲಕ ಕಾಲುವೆಗಳನ್ನು ಸ್ವಚ್ಛಗೊಳಿಸಿದರು.

ಕಾಲುವೆಗಳಲ್ಲಿ ಹೂಳೂ ಹಾಗೂ ಪೊದೆಗಳಿಂದ ತುಂಬಿದ್ದು, ಜೊತೆಗೆ ಅಲ್ಲಲ್ಲಿ ಹಾಳಾಗಿದೆ. ರಿಪೇರಿ ಮಾಡಿಸುವಂತೆ ಕೆರೆ ನೀರು ಬಳಕೆದಾರರ ಸಂಘದ ಮೂಲಕ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೇಳಿದರೆ ಅನುದಾನ ಇಲ್ಲ ಎಂದು ಸಬೂಬು ಹೇಳುತ್ತಾರೆ. ಆದ್ದರಿಂದ ರೈತರೇ ಸ್ವಚ್ಛಗೊಳಿಸುತ್ತಿವೆ ಎಂದು ರೈತ ಬಣಕಾರ್, ಪರ‍್ಯಾನಾಯ್ಕ, ರಾಮಲೆಪ್ಪ, ಕಟ್ಟಿ ಶಿವಾನಂದಪ್ಪ, ಕುಂಬಾರ ಮಂಜುನಾಥ, ರಾಜೇಶ್, ಚಿನ್ನಾಪುರೆಪ್ಪ, ಅಂಬಣ್ಣ, ಜಂಬಣ್ಣ, ಪಕ್ಕೀರಪ್ಪ, ನಾಗಪ್ಪ, ಸುರೇಶ್, ರಮೇಶ್, ವೆಂಕಟೇಶ್‌ನಾಯ್ಕ, ಹನುಮಂತ, ಬಾಪುರಿ ರಾಮ, ಬಸಪ್ಪ, ಗಾಳೆಪ್ಪ ತಿಳಿಸಿದರು.

ಇನ್ನು ಕೆರೆ ಎರಡನೇ ತೂಬಿನ ಬಳಿ ಗೇಜು ಎತ್ತುವ ಕಟ್ಟದ ಶಿಥಿಲಗೊಂಡಿದ್ದು, ಜೊತೆಗೆ ಮೂರನೇ ಕೋಡಿಯ ಬಳಿ ಬೊಂಗಾಬಿದ್ದು ನೀರು ಪೋಲಾಗುತ್ತಿದೆಎಂದು ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಈ.ಶೇಷಪ್ಪ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT