ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಡಿಸೈನ್‌ ಸ್ಪರ್ಧೆಯಲ್ಲಿ ಕೌಸ್ತುಭ ಸಾಧನೆ

Last Updated 22 ಜುಲೈ 2019, 13:05 IST
ಅಕ್ಷರ ಗಾತ್ರ

ಹೊಸಪೇಟೆ: ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಏರೋ ಡಿಸೈನ್‌ ಸ್ಪರ್ಧೆಯಲ್ಲಿ ನಗರದ ಕೆ.ಎಸ್‌.ಪಿ.ಎಲ್‌. ಶಾಲೆಯ ಹಳೆಯ ವಿದ್ಯಾರ್ಥಿ ಕೌಸ್ತುಭ ಅಣ್ಣಿಗೇರಿ ಅವರನ್ನು ಒಳಗೊಂಡ ಕೆ.ಎಲ್‌.ಇ. ಕಾಲೇಜಿನ ಏರೋಕೆ ತಂಡ ವಿಶೇಷ ಸಾಧನೆ ಮಾಡಿದೆ.

ತಂಡವು ಸಾಮಾನ್ಯ ತರಗತಿ, ಅತ್ಯುತ್ತಮ ವಿನ್ಯಾಸದಲ್ಲಿ ಮೊದಲ ಸ್ಥಾನ ಹಾಗೂ ಮೈಕ್ರೊ ಕ್ಲಾಸ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ದೇಶದ ವಿವಿಧ ಭಾಗಗಳಿಂದ ಒಟ್ಟು 146 ತಂಡಗಳು ಪಾಲ್ಗೊಂಡಿದ್ದವು.

ಕೌಸ್ತುಭ ಹಾಗೂ ಅವರ ತಂಡದ ಸಾಧನೆಗೆ ಶಾಲೆಯ ಅಧ್ಯಕ್ಷ ದೀಪಕ್‌ ಕುಮಾರ್‌ ಸಿಂಗ್‌, ಟ್ರಸ್ಟಿ ಕೃಷ್ಣಕುಮಾರಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT