ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಕಾಲು ಜೋಡಣೆ ಶಿಬಿರಕ್ಕೆ ತೆರೆ

210 ಜನರಿಗೆ ಕೃತಕ ಕಾಲು ಅಳವಡಿಕೆ; 20 ಮಂದಿಗೆ ಊರುಗೋಲು ವಿತರಣೆ
Last Updated 16 ಮೇ 2019, 13:44 IST
ಅಕ್ಷರ ಗಾತ್ರ

ಹೊಸಪೇಟೆ:ಎಂ.ಎಸ್.ಪಿ.ಎಲ್‌. ಹಾಗೂ ಜೈಪುರದ ಭಗವಾನ್‌ ಮಹಾವೀರ್‌ ಅಂಗವಿಕಲರ ಸಹಕಾರ ಸಮಿತಿ ಸಹಭಾಗಿತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಗುರುವಾರ ತೆರೆ ಬಿತ್ತು.

ಒಟ್ಟು 210 ಜನರಿಗೆ ಕೃತಕ ಕಾಲು ಅಳವಡಿಸಲಾಯಿತು. 20 ಮಂದಿಗೆ ಊರುಗೋಲು, 8 ಹ್ಯಾಂಡ್‌ ಸ್ಟಿಕ್‌ , ಎರಡು ವಾಕರ್‌, ತಲಾ ಒಂದು ವೀಲ್‌ ಚೇರ್‌, ಮೂರು ಚಕ್ರದ ಬೈಸಿಕಲ್‌ ವಿತರಿಸಲಾಯಿತು. ನಾಲ್ಕು ಜನರಿಗೆ ಫಿಜಿಯೊಥೆರಪಿ, ಇಬ್ಬರಿಗೆ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ಮಾಡಿದರು.

ಶಿಬಿರದಲ್ಲಿ ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಮೈಸೂರು, ಆಂಧ್ರ ಪ್ರದೇಶದ ಕರ್ನೂಲ್‌ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಸ್ಥಳದಲ್ಲೇ ಕಾಲಿನ ಅಳತೆ ಪಡೆದು, ಅಲ್ಲಿಯೇ ತಯಾರಿಸಿ, ಜೋಡಿಸಲಾಯಿತು. ಪೋಲಿಯೊ ಸೇರಿ ಇತರ ಕಾರಣಗಳಿಂದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಕ್ಯಾಲಿಪರ್ಸ್‌ಗಳನ್ನು ಅಳವಡಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಾಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT