ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಉಚಿತ ಕ್ಯಾನ್ಸರ್‌ ತಪಾಸಣೆ ಶಿಬಿರ

Last Updated 26 ಜೂನ್ 2019, 16:12 IST
ಅಕ್ಷರ ಗಾತ್ರ

ಹೊಸಪೇಟೆ: ‘ಉಚಿತ ಕ್ಯಾನ್ಸರ್‌ ತಪಾಸಣೆ ಶಿಬಿರವನ್ನು ಇದೇ 28ರಂದು ನಗರ ಹೊರವಲಯದ ಸಂಕ್ಲಾಪುರ ಟಿ.ಎಂ.ಎ.ಇ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕಾಲೇಜಿನ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ಹತ್ತರಿಂದ ಮಧ್ಯಾಹ್ನ ಎರಡು ಗಂಟೆಯ ವರೆಗೆ ಶಿಬಿರ ನಡೆಯಲಿದೆ. ಬಾಗಲಕೋಟೆಯ ಹಾಲಮ್ಮ ಕೆರುಡಿ ಕ್ಯಾನ್ಸರ್‌ ಆಸ್ಪತ್ರೆಯ ಆಂಕೊಲಾಜಿಸ್ಟ್‌ಗಳಾದ ಡಾ. ಸುರೇಶ, ಡಾ. ಲೋಕೇಶ ಅವರು ತಪಾಸಣೆ ಮಾಡುವರು’ ಎಂದು ಮಾಹಿತಿ ನೀಡಿದರು.

‘ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಕೊಳ್ಳಲು ಬಯಸುವವರು ಮೊಬೈಲ್‌ ಸಂಖ್ಯೆಗೆ 99720 11726, 9980647357 ಕರೆ ಮಾಡಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ಯಾರು ಬೇಕಾದರೂ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಳ್ಳಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಕ್ಯಾನ್ಸರ್‌ ಮೊದಲ ಹಂತದಲ್ಲಿ ಇರುವುದು ಗೊತ್ತಾದರೆ ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ, ಮೂರು ಅಥವಾ ನಾಲ್ಕನೇ ಹಂತ ತಲುಪಿದರೆ ಏನೂ ಮಾಡಲಾಗದು. ಹಾಗಾಗಿ ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ’ ಎಂದು ಅಭಿಪ್ರಾಯಪಟ್ಟರು.

‘ಅಸಹಜವಾಗಿ ದೇಹದ ತೂಕ ಕಡಿಮೆಯಾಗುವುದು, ದೇಹದ ಯಾವುದಾದರೂ ಭಾಗದಲ್ಲಿ ಅನೇಕ ದಿನಗಳಿಂದ ಗೆಡ್ಡೆ ಬೆಳೆಯುತ್ತಿರುವುದು, ಬಾಯಿಯಲ್ಲಿ ಬೇಗನೆ ಹುಣ್ಣು ಗುಣವಾಗದಿರುವುದು, ಮಚ್ಚೆ ಇರುವುದು, ದೀರ್ಘಕಾಲದಿಂದ ಕೆಮ್ಮು, ನಿಶ್ಯಕ್ತಿ, ಹೆಣ್ಣು ಮಕ್ಕಳ ಸ್ತನದ ಭಾಗದಲ್ಲಿ ಗಂಟು, ಯೋನಿ ಸುತ್ತ ಬಿಳಿ ಸ್ರಾವ, ಅತಿಯಾದ ರಕ್ತಸ್ರಾವ, ದೀರ್ಘಕಾಲದಿಂದ ತಂಬಾಕು ಸೇವಿಸುತ್ತಿರುವವರು, ನೀರಿನ ರೀತಿಯಲ್ಲಿ ಭೇದಿಯಾಗುತ್ತಿದ್ದರೆ, ರಕ್ತ ಕಾಣಿಸಿಕೊಳ್ಳುತ್ತಿದ್ದರೆ ಅವರು ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ತಿಳಿಸಿದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ. ನಟರಾಜ ಹಿರೇಮಠ, ಶಿಬಿರದ ಉಸ್ತುವಾರಿ ಡಾ. ಮಹೇಶ್ವರ, ಡಾ. ಬಸವರಾಜೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT