ರಾಮಮಂದಿರ ಶ್ರದ್ಧಾನಿಧಿ ಸಂಗ್ರಹಕ್ಕೆ ಚಾಲನೆ

ಬಳ್ಳಾರಿ: ರಾಮಮಂದಿರ ನಿರ್ಮಾಣದ ಶ್ರದ್ಧಾನಿಧಿ ಸಂಗ್ರಹಕ್ಕೆ ನಗರದ ಅಧಿದೇವತೆ ಜನಕದುರ್ಗಮ್ಮ ಗುಡಿ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಸಮಿತಿ ಸದಸ್ಯ ಸತೀಶ್ ಜಿ ಹಾಗೂ ಕಲ್ಯಾಣ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಘದ ಉತ್ತರ ಕರ್ನಾಟಕ ಪ್ರಾಂತದ ಬಿ.ಪ್ರಸನ್ನ ‘ಸುಮಾರು 500 ವರ್ಷಗಳ ಹಿಂದೆ ಆಗಿದ್ದ ಅವಮಾನವನ್ನು ಸರಿಪಡಿಸಿ 4 ಲಕ್ಷ ಗ್ರಾಮಗಳಲ್ಲಿ 11 ಕೋಟಿ ಮನೆಗಳಿಂದ ಶ್ರದ್ಧಾ ನಿಧಿಯನ್ನು ಸಂಗ್ರಹಿಸಿ ಶ್ರೀರಾಮ ಮಂದಿರ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ’ ಎಂದರು.
ಜ.17ರಂದು ನಗರದ ಎಲ್ಲ ಮನೆಗಳಿಗೆ ಭೇಟಿ ನೀಡಿ ಕಾರ್ಯಕರ್ತರು ನಿಧಿ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.
ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಡಾ.ಬಿ.ಕೆ.ಸುಂದರ್, ಬುಡಾ ಆಧ್ಯಕ್ಷ ದಮ್ಮೂರು ಶೇಖರ್, ಎಸ್.ಜೆ.ವಿ.ಮಹಿಪಾಲ್ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.