ಗಾನಗಂಗಾ ಪ್ರತಿಷ್ಠಾನಕ್ಕೆ ನಾಲ್ಕರ ಸಂಭ್ರಮ

7

ಗಾನಗಂಗಾ ಪ್ರತಿಷ್ಠಾನಕ್ಕೆ ನಾಲ್ಕರ ಸಂಭ್ರಮ

Published:
Updated:
ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೂನಿಯರ್‌ ಯಶ್‌ ಡಾನ್ಸ್‌ ಮಾಡಿದರು

ಹೊಸಪೇಟೆ: ಇಲ್ಲಿನ ಪಂಪ ಕಲಾ ಮಂದಿರದಲ್ಲಿ ಭಾನುವಾರ ರಾತ್ರಿ ಮರಿಯಮ್ಮನಹಳ್ಳಿಯ ಗಾನಗಂಗಾ ಕಲಾ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು.

ಗಾನಗಂಗಾ ಸಂಗೀತ ಪ್ರಶಸ್ತಿಯನ್ನು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಾವಿದ ಮಲ್ಲಿಕಾರ್ಜುನ ತುರವನೂರು ಅವರಿಗೆ ಪ್ರದಾನ ಮಾಡಲಾಯಿತು. ಸಮಾಜ ಸೇವಕರಾದ ಕಟ್ಟಾ ಮೋಹನ್‌, ಕೆ.ಎಂ. ಹೇಮಯ್ಯ ಸ್ವಾಮಿ, ಬುಡ್ಡಿ ಬಸವರಾಜ, ಕೆ.ಪಿ. ಉಮಾಪತಿ, ವೆಂಕಟೇಶ್‌ ಅವರಿಗೆ ‘ಮಾವನತಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆ.ಎಸ್‌.ಡಬ್ಲ್ಯೂ ಉಪಾಧ್ಯಕ್ಷ ಸಿ.ಆರ್‌. ಆಂಜನೇಯಲು, ‘ಗಾನಗಂಗಾ ಪ್ರತಿಷ್ಠಾನವು ಸಂಗೀತ, ಸಾಹಿತ್ಯ ಬೆಳೆಸುವ ಕೆಲಸ ಮಾಡುತ್ತಿದೆ. ಎಲೆಮರೆಕಾಯಿಯಂತೆ ದುಡಿಯುತ್ತಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸ’ ಎಂದು ಕೊಂಡಾಡಿದರು.

ಕಿರ್ಲೊಸ್ಕರ್‌ ಫೆರಸ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌.ವಿ. ಗುಮಾಸ್ತೆ, ಸಹಕಾರ ಸಂಘಗಳ ಉಪನಿಬಂಧಕ ಲಿಯಾಕತ್‌ ಅಲಿ, ಎ.ಎಂ. ಗುರುಮೂರ್ತಿ, ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮೀಜಿ, ನಂಜುಂಡಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರದಾರ್‌, ಮುಖ್ಯಶಿಕ್ಷಕ ಎಚ್‌. ಹನುಮಂತಪ್ಪ ಇದ್ದರು. ಬಳಿಕ ಸಂಗೀತ ನೃತ್ಯೋತ್ಸವ ನಡೆಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !