ರೇಖೆಗಳಲ್ಲಿ ಮೂಡಿ ಬಂದರು ಗಾಂಧೀಜಿ!

7

ರೇಖೆಗಳಲ್ಲಿ ಮೂಡಿ ಬಂದರು ಗಾಂಧೀಜಿ!

Published:
Updated:
Deccan Herald

ಬಳ್ಳಾರಿ: ಪತ್ರಕರ್ತ, ತೀಕ್ಷ್ಣಮತಿ, ಮಿತಾಹಾರಿ, ಚರಕಪ್ರಿಯ, ಸಮಾಜ ವಿಶ್ಲೇಷಕ, ಅಗ್ರಶ್ರೇಣಿಯ ಚಿಂತಕ ... ಹೀಗೆ ವಿಭಿನ್ನ ವ್ಯಕ್ತಿತ್ವಗಳ ಮಹಾತ್ಮ ಗಾಂಧೀಜಿಯ ವ್ಯಕ್ತಿತ್ವ ರೇಖೆಗಳಲ್ಲಿ ಒಡಮೂಡಿದರೆ ಹೇಗೆ?

ಇಂಥ ಆಲೋಚನೆ ಬಂದಿದ್ದೇ ಕಲಾವಿದ ಮಂಜುನಾಥ ಗೋವಿಂದವಾಡ ತಮ್ಮ ಕೆಲಸವನ್ನು ಆರಂಭಿಸಿದ್ದರು. ಹದಿನೈದು ದಿನಗಳಲ್ಲಿ ಇಪ್ಪತ್ತೆರಡು ರೇಖಾಚಿತ್ರಗಳು ಮೂಡಿ ಬಂದಿದ್ದವು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಗಾಂಧೀ ಜಯಂತಿ 150– ಪ್ರಯುಕ್ತ ಈ ರೇಖಾ ಚಿತ್ರಗಳ ಲೋಕ ಅನಾವರಣಗೊಂಡಿತ್ತು.

ವಾರ್ತಾ ಇಲಾಖೆಯು ಗಾಂಧೀಜಿ ಜೀವನ ಸಾಧನೆ ಕುರಿತು ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನದೊಂದಿಗೆ ಮಂಜುನಾಥ ಅವರ ರೇಖಾ ಚಿತ್ರ ಕಲಾಕೃತಿಗಳೂ ಗಮನ ಸೆಳೆದಿದ್ದವು. ಗಾಂಧೀಜಿಯ ವಿಭಿನ್ನ ವ್ಯಕ್ತಿತ್ವಗಳು ಬಿಳಿ ಹಾಳೆಗಳ ಕ್ಯಾನ್‌ವಾಸಿನ ಮೇಲೆ ಮೂಡಿದ್ದವು.

ಗಾಂಧೀಜಿಯವರ ವಿವಿಧ ಚಿತ್ತವೃತ್ತಿಗಳ ಅನಾವರಣವೂ ಈ ರೇಖಾ ಚಿತ್ರಗಳಲ್ಲಿ ಎದ್ದು ಕಂಡಿತ್ತು. ಮಗುವಿನೊಡನೆ ಸಂಭ್ರಮ, ಪತ್ನಿ ಕಸ್ತೂರ ಬಾ ಅವರೊಂದಿಗೆ ನಿಂತು ಗಂಭೀರ ಸಮಾಲೋಚನೆ, ಠಾಗೂರರೊಂದಿಗೆ ಒಂದು ಮಧುರ ಕ್ಷಣ, ಚರಕದ ಮುಂದೆ ಗಂಭೀರ ಓದಿನಲ್ಲಿ ನಿರತರಾದ ಗಾಂಧೀಜಿ –ಹೀಗೆ 22 ಅನನ್ಯ ರೇಖಾಚಿತ್ರಗಳು ನೋಡುಗರ ವಿಶೇಷ ಗಮನ ಸೆಳೆದಿದ್ದವು.

15 ದಿನ: ಚಿತ್ರಕಲಾಕೃತಿಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮಂಜುನಾಥ್‌, ‘ಹದಿನೈದು ದಿನ ಕಾಲ ಈ ಕಲಾಕೃತಿಗಳನ್ನು ರಚಿಸಿರುವೆ. ಪ್ರತಿ ದಿನ ಬೆಳಗಿನ ಜಾವ 5ರಿಂದ 7, ರಾತ್ರಿ 10ರಿಂದ 11ರವರೆಗೂ ಈ ಕಲಾಕೃತಿಗಳ ರಚನೆಗೆ ಸಮಯ ಮೀಸಲಿಟ್ಟಿದ್ದೆ’ ಎಂದು ಸ್ಮರಿಸಿದರು.

ಹೋರಾಟದ ಚಿತ್ರಗಳು: ಈ ರೇಖಾ ಚಿತ್ರಗಳಿಗೂ ಮುನ್ನ, ಅವರು ಒಂದು ವರ್ಷದ ಹಿಂದೆ, ಸ್ವಾತಂತ್ರ್ಯ ಹೋರಾಟದ ಕುರಿತ 25 ರೇಖಾ ಚಿತ್ರಗಳನ್ನು ರಚಿಸಿದ್ದರು. ಅವುಗಳಿಗೂ ಕಲಾಸಕ್ತರ ಮುಕ್ತಪ್ರಶಂಸೆ ದೊರಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !