ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಗಣೇಶ ಉತ್ಸವ; 55 ಜನ ರಕ್ತದಾನ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರದಲ್ಲಿ ಭಾನುವಾರ ಗಜಾನನ ಸೇವಾ ಸಮಿತಿಯು 13ನೇ ಗಣೇಶ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಬಿರದಲ್ಲಿ 55 ಜನ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.

ಇದೇ ವೇಳೆ ಮಕ್ಕಳ ಉಚಿತ ಆರೋಗ್ಯ ಶಿಬಿರ ನಡೆಯಿತು. ಪಟ್ಟಣದ ವಿವಿಧ ಬಡಾವಣೆಗಳಿಂದ ಜನ ಮಕ್ಕಳನ್ನು ಶಿಬಿರಕ್ಕೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದರು.

ವೈದ್ಯರಾದ ಸೋಮಶೇಖರ್‌, ಎಚ್‌. ಸಿದ್ದಲಿಂಗ, ಸುಹಾಸ್‌, ವಲಯ ಅರಣ್ಯ ಅಧಿಕಾರಿಗಳಾದ ವಿನೋದಕುಮಾರ್‌, ಭಾಸ್ಕರ್‌, ಉಪ ಅರಣ್ಯ ಅಧಿಕಾರಿಗಳಾದ ದೇವರಾಜ, ನಿಲೀಮಾ, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ, ಗಜಾನನ ಸೇವಾ ಸಮಿತಿಯ ಮಲ್ಲಿಕಾರ್ಜುನ ಸ್ವಾಮಿ, ಕೇಶವಗೌಡ, ತೇಜಮೂರ್ತಿ, ಎಂ. ಸುರೇಶ್‌ ಇದ್ದರು. 

Post Comments (+)