ಭಾನುವಾರ, ನವೆಂಬರ್ 17, 2019
28 °C

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹ: 23 ರಂದು ಧರಣಿಗೆ ನಿರ್ಧಾರ

Published:
Updated:

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ಗ್ರಾಮ ಪಂಚಾಯ್ತಿಗೆ ಸೇರಿದ ಬತ್ತನಹಳ್ಳಿ ಸುತ್ತಮುತ್ತ 117 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ 23ರಂದು ಧರಣಿ ನಡೆಸಲಾಗುವುದು ಎಂದು ಗ್ರಾಮದ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಆಂಜಿನಪ್ಪ, ಗುರುಸ್ವಾಮಿ‌ ವಜ್ರಾಲ್ ತಿಳಿಸಿದರು.

ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿ ಅ.17ರಂದು ಕೊಟ್ಟೂರು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು.‌ ಈಗ ಜಿಲ್ಲಾಧಿಕಾರಿ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2017 ರಿಂದಲೇ ಒತ್ತುವರಿ ತೆರವಿಗೆ ಆಗ್ರಹಿಸಿ ಮನವಿಗಳನ್ನಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ‌ಬತ್ತನಹಳ್ಳಿ, ಗಜಾಪುರದ ಕೆಲವರು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸುವವರೆಗೂ ಧರಣಿ‌ ನಿಲ್ಲಿಸುವುದಿಲ್ಲ ಎಂದರು.

ಮುಖಂಡರಾದ ಈರಣ್ಣ, ವಕೀಲ ‌ಕೊಟ್ರೇಶ್ ಇದ್ದರು.

ಪ್ರತಿಕ್ರಿಯಿಸಿ (+)