ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮ್ಮಿಗನೂರು ಗ್ರಾಮ ಪಂಚಾಯಿತಿ: ಅಂಜಿನಮ್ಮ ಅಧ್ಯಕ್ಷೆ, ಮಾರೆಮ್ಮ ಉಪಾಧ್ಯಕ್ಷೆ

ಎಮ್ಮಿಗನೂರು ಗ್ರಾಮ ಪಂಚಾಯಿತಿ
Last Updated 31 ಜನವರಿ 2021, 3:16 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಶನಿವಾರ ಜರುಗಿತು.
ಎಸ್.ಸಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂಜಿನಮ್ಮ 19ಮತ ಗಳಿಸಿ ಜಯಗಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಾದಿಲಿಂಗಪ್ಪ 16ಮತ ಪಡೆದು ಪರಾಭವಗೊಂಡರು.

ಸಾಮಾನ್ಯ ಮಹಿಳೆ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾರೆಮ್ಮ 18 ಮತ ಗಳಿಸಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಜ್ಯೋತೆಮ್ಮ 17ಮತ ಪಡೆದು ಪರಾಭವಗೊಂಡರು.

ಚುನಾವಣೆಯಲ್ಲಿ ಗ್ರಾ.ಪಂ ಸದಸ್ಯರಾದ ಸುನಿತಾ, ಎಚ್.ಎಸ್. ಸಣ್ಣ ಜಡೇಶ್, ಭಂಗಿ ಜಡೆಮ್ಮ, ಮುಂತಾಜ್ ಬೇಗಂ, ಯರ್ರಿಸ್ವಾಮಿ, ಇಮಾಮ್‍ಸಾಬ್, ಭಾರತಿ, ಲಕ್ಷ್ಮಮ್ಮ, ಖಾಜಾ ಹುಸೇನ್, ಎಚ್. ಪರಮೇಶ್ವರ, ಎಚ್.ಲತಾ, ಕರಿಮರಿ ಈರಮ್ಮ, ಯಮ್ಮಿನೂರಪ್ಪ, ಎಚ್. ಲಕ್ಷ್ಮಿ, ಎ. ವೀರೇಂದ್ರರೆಡ್ಡಿ, ಜಿ. ವಿಜಯಲಕ್ಷ್ಮಿ, ಎಚ್. ಜಡೆಯ್ಯಸ್ವಾಮಿ, ಜೀರ್ ಲೋಕೇಶ್, ಪಿ.ಲಕ್ಷ್ಮಿ, ವೀರೇಶಪ್ಪ, ಕೆ.ಮಾಬುಸಾಬ್, ಮಾರೆಮ್ಮ, ಸಾಯಿಬಣ್ಣ, ಬೂದುಗುಪ್ಪ, ಶಾರದಮ್ಮ, ಎಂ. ಜಯರಾಮ, ಎಚ್.ಜಿ. ಶಾರದಾ, ಜಡೆಪ್ಪ, ಲಲಿತಮ್ಮ, ಜಿ. ಮೌನೇಶ್, ಸಿದ್ದಮ್ಮ ಪಾಲ್ಗೊಂಡಿದ್ದರು.

ಚುನಾವಣಾಧಿಕಾರಿ ಬಿ. ಬಾಲಕೃಷ್ಣ, ತಹಶೀಲ್ದಾರ್ ಗೌಸಿಯಾಬೇಗಂ, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಪಿಡಿಒ ತಾರುನಾಯ್ಕ ಉಪಸ್ಥಿತರಿದ್ದರು. ಗ್ರಾಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT