ಮಂಗಳವಾರ, ಮಾರ್ಚ್ 9, 2021
31 °C

ಮಧ್ಯರಾತ್ರಿ ಮತದಾರರಿಗೆ ಹಣ, ಹೆಂಡ, ಮಾಂಸದ ಆಮಿಷ: ಕೋಳಿಯೊಂದಿಗೆ ಮಸಾಲೆ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ/ಕೂಡ್ಲಿಗಿ: ಗ್ರಾಮ ಪಂಚಾಯ್ತಿಗೆ 2ನೇ ಹಂತದ ಚುನಾವಣೆಯ ಮುನ್ನಾ ದಿನವಾದ ಶನಿವಾರ ರಾತ್ರಿ ವಿವಿಧೆಡೆ ಮತದಾರರಿಗೆ ಹಣ, ಕೋಳಿ ಮಾಂಸ ಮತ್ತು ಮಸಾಲೆ ಪದಾರ್ಥಗಳನ್ನು ವಿತರಿಸಲಾಗಿದೆ‌.

 ಸಸ್ಯಾಹಾರಿಗಳಿಗೆ   ಬೇಳೆ,ಬೆಲ್ಲ,ಅಕ್ಕಿ,ಎಣ್ಣೆ ಸಹಿತ ಪಡಿತರ ನೀಡಿ ಮತ ನೀಡುವಂತೆ ಮನವಿ ಮಾಡಿದರು. 

 ಪಟ್ಟಣದ ಬಹುತೇಕ ಕಿರಾಣಿ ಅಂಗಡಿಗಳು, ಕೋಳಿ ಫಾರಂಗಳು ಗಿಜಿಗುಡುತ್ತಿದ್ದವು.

 ಕೆಲವು ಕಡೆಗಳಲ್ಲಿ ಮಧ್ಯರಾತ್ರಿ ಆಗುತ್ತಿದ್ದಂತೆ ಮನೆಗಳಿಗೆ ತೆರಳಿ ಮತಕ್ಕೆ ₹200 ಗಳಿಂದ ₹500 ವರೆಗೂ ನೀಡಿದರು.

 ಈ ಬಾರಿ ಹಣ,ಹೆಂಡ,ತುಂಡು ಭಾರಿ ಹಂಚಿಕೆ ಆಯ್ತು.  ಗ್ರಾಮ ಪಂಚಾಯ್ತಿಗಳ ಚುನಾವಣೆಯಲ್ಲಿ ಈ ಪರಿ ಹಂಚಿಕೆಯಾಗಿದ್ದು ಇದೇ ಮೊದಲು ಎನ್ನುತ್ತಾರೆ ಗ್ರಾಮಸ್ಥರೊಬ್ಬರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು