ಬಳ್ಳಾರಿ | ಗ್ರಾ.ಪಂ ಮೊದಲ ಹಂತದ ಚುನಾವಣೆ; 3,290 ಅಭ್ಯರ್ಥಿಗಳು ಕಣದಲ್ಲಿ

ಬಳ್ಳಾರಿ: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಯ ಕಣದಲ್ಲಿ ಅಂತಿಮವಾಗಿ 3,290 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕುರುಗೋಡು ತಾಲ್ಲೂಕಿನ 1 ಹಾಗೂ ಸಿರುಗುಪ್ಪ ತಾಲ್ಲೂಕಿನ 34 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೇ ಇರುವುದರಿಂದ ಅಲ್ಲಿ ಚುನಾವಣೆ ಪ್ರಕ್ರಿಯೆ ಸದ್ಯಕ್ಕೆ ನಡೆಯುವುದಿಲ್ಲ.
ಮೊದಲ ಹಂತದ ಚುನಾವಣೆ ನಡೆಯಲಿರುವ ತಾಲ್ಲೂಕುಗಳ ಪೈಕಿ ಸಿರುಗುಪ್ಪ ತಾಲ್ಲೂಕಿನಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯ್ತಿಗಳಿದ್ದು, ಅಲ್ಲಿಯೇ ಅತಿ ಹೆಚ್ಚು ಸ್ಥಾನಗಳಿಗೆ ನಾಮಪತ್ರಗಳ ಸಲ್ಲಿಕೆಯಾಗಿಲ್ಲ. ಅತಿ ಹೆಚ್ಚು ಸ್ಥಾನಗಳುಳ್ಳ ಬಳ್ಳಾರಿ ತಾಲ್ಲೂಕು, ಹೊಸಪೇಟೆ ಮತ್ತು ಕಂಪ್ಲಿಯಲ್ಲಿ ಎಲ್ಲ ಸ್ಥಾನಗಳಿಗೂ ನಾಮಪತ್ರಗಳ ಸಲ್ಲಿಕೆಯಾಗಿದೆ.
ನಾಮಪತ್ರಗಳ ಸಲ್ಲಿಕೆಯಾಗದ ಸ್ಥಾನಗಳಿಗೆ ಸದಸ್ಯರ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
5: ತಾಲ್ಲೂಕುಗಳು
86: ಗ್ರಾಮ ಪಂಚಾಯ್ತಿಗಳು
1,738: ಒಟ್ಟು ಸ್ಥಾನಗಳು
35: ನಾಮಪತ್ರ ಸಲ್ಲಿಕೆಯಾಗದ ಸ್ಥಾನಗಳು
330: ಅವಿರೋಧ ಆಯ್ಕೆ
1373: ಸ್ಥಾನಗಳಿಗೆ ಚುನಾವಣೆ
ತಾಲ್ಲೂಕು | ಒಟ್ಟು ಸ್ಥಾನ | ಅವಿರೋಧ ಆಯ್ಕೆ |
ಬಳ್ಳಾರಿ | 522 | 73 |
ಕುರುಗೋಡು | 241 | 95 |
ಸಿರುಗುಪ್ಪ | 489 | 93 |
ಹೊಸಪೇಟೆ | 274 | 41 |
ಕಂಪ್ಲಿ | 212 | 28 |
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.