ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಕ ಹೆಚ್ಚಳ; ಕುಸಿದ ದ್ರಾಕ್ಷಿ ದರ

Last Updated 7 ಫೆಬ್ರುವರಿ 2019, 13:06 IST
ಅಕ್ಷರ ಗಾತ್ರ

ಹೊಸಪೇಟೆ: ಮಾರುಕಟ್ಟೆಗೆ ದ್ರಾಕ್ಷಿ ಆವಳ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಅದರ ಬೆಲೆ ಕುಸಿತ ಕಂಡಿದೆ.

ವಾರದ ಹಿಂದೆ ಪ್ರತಿ ಕೆ.ಜಿ. ದ್ರಾಕ್ಷಿ ₹80ಕ್ಕೆ ಮಾರಾಟವಾಗುತ್ತಿತ್ತು. ಅದಕ್ಕೂ ಮೊದಲು ₹100ರಿಂದ ₹110 ಇತ್ತು. ಈಗ ದಿಢೀರನೆ ₹60ಕ್ಕೆ ಕುಸಿದಿದೆ. ಕಪ್ಪು ದ್ರಾಕ್ಷಿ ಕೂಡ ಇದೇ ಹಾದಿಯಲ್ಲಿದೆ.

ಶಿಮ್ಲಾ ಸೇಬಿನ ಬೆಲೆ ₹20 ಏರಿಕೆ ಕಂಡಿದೆ. ಹಿಂದಿನ ವಾರ ಪ್ರತಿ ಕೆ.ಜಿ. ಸೇಬು ₹120 ಇತ್ತು. ಈ ವಾರ ₹140ಕ್ಕೆ ಹೆಚ್ಚಳವಾಗಿದೆ.ದಾಳಿಂಬೆ ಹಣ್ಣಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರತಿ ಕೆ.ಜಿ. ದಾಳಿಂಬೆ ₹80 ರಿಂದ 90 ಇದೆ.

ಪ್ರತಿ ಕೆ.ಜಿ. ಅಂಜೂರ ₹50ರಿಂದ ₹60 ಇದ್ದರೆ, ಕಲ್ಲಂಗಡಿ ₹15ರಿಂದ ₹20 ಇದೆ. ಕಲ್ಲಂಗಡಿ ಆವಕ ಕೂಡ ಹೆಚ್ಚಾಗುತ್ತಿದ್ದು, ಬರುವ ದಿನಗಳಲ್ಲಿ ಅದರ ಬೆಲೆ ತಗ್ಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ತರಕಾರಿಯಲ್ಲಿ ಹಸಿರು ಬಟಾಣಿ ದರ ₹10 ಏರಿಕೆಯಾಗಿದೆ. ಈ ಹಿಂದೆ ಪ್ರತಿ ಕೆ.ಜಿ. 50ಕ್ಕೆ ಮಾರಾಟವಾಗುತ್ತಿದ್ದ ಹಸಿರು ಬಟಾಣಿ ಈಗ ₹60ಕ್ಕೆ ಏರಿದೆ.

ಬಹುತೇಕ ತರಕಾರಿಗಳ ದರ ಯಥಾಸ್ಥಿತಿ ಇದೆ.ಪ್ರತಿ ಕೆ.ಜಿ. ಬೆಂಡೆಕಾಯಿ, ಚವಳಿಕಾಯಿ, ಕ್ಯಾರೆಟ್‌, ಸೌತೆಕಾಯಿ, ಹಿರೇಕಾಯಿ, ಹಾಗಲಕಾಯಿ ₹40ಕ್ಕೆ ಮಾರಾಟ ಮಾಡಲಾಗುತ್ತಿದೆ. ಹಿಂದಿನ ವಾರ ಕೂಡ ಇದೇ ದರ ಇತ್ತು.

ಎಲೆಕೋಸು, ಹೂಕೋಸಿನ ಬೆಲೆ ಸ್ವಲ್ಪ ತಗ್ಗಿದೆ. ಮಧ್ಯಮ ಗಾತ್ರದ ಪ್ರತಿ ಎಲೆಕೋಸು, ಹೂಕೋಸು ₹10ರಿಂದ ₹12ಕ್ಕೆ ಮಾರಾಟ ಮಾಡಲಾಗುತ್ತಿದೆ. ಹಿಂದಿನ ವಾರ ₹15ರಿಂದ ₹20 ಇತ್ತು. ಇನ್ನು ಕೊತ್ತಂಬರಿ ₹10ಕ್ಕೆ ಎರಡು ಕಟ್ಟು, ಪಾಲಕ್‌ ₹10ಕ್ಕೆ ನಾಲ್ಕು ಕಟ್ಟು, ನಾಲ್ಕು ಸಣ್ಣ ಕಟ್ಟು ಮೆಂತೆ ₹10 ಇದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಸೊಪ್ಪಿನ ದರ ₹2ರಿಂದ ₹3 ಹೆಚ್ಚಳವಾಗಿದೆ.

ಪ್ರತಿ ಕೆ.ಜಿ. ಟೊಮೆಟೊ ₹10ರಿಂದ 12ಕ್ಕೆ ಮಾರಾಟವಾಗುತ್ತಿದೆ. ಮಧ್ಯಮ ಗಾತ್ರದ ಈರುಳ್ಳಿ ₹12ರಿಂದ ₹15 ಕೆ.ಜಿ. ಇದೆ.

ಮೊಟ್ಟೆ, ಚಿಕನ್‌, ಮಟನ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ ಕೆ.ಜಿ. ಚಿಕನ್‌ ₹160, ಮಟನ್‌ ₹460 ಇದೆ. ಒಂದು ಕ್ರೇಟ್‌ ಮೊಟ್ಟೆ ₹123 ಇದೆ. ಪ್ರತಿ ಕೆ.ಜಿ. ಸಕ್ಕರೆ ₹35ರಿಂದ ₹40, ತೊಗರಿ ಬೇಳೆ ₹75ರಿಂದ ₹80, ಶೇಂಗಾ ₹90ರಿಂದ ₹100, ಜೋಳ ₹35ರಿಂದ ₹40, ಸೋನಾ ಮಸೂರಿ ಅಕ್ಕಿ ₹45ರಿಂದ ₹50 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT