ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಪೊಲೀಸ್ ಠಾಣೆ ಹಸಿರೀಕರಣ ಕಾರ್ಯಕ್ರಮ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಗ್ರೀನ್‌ ಹೊಸಪೇಟೆ’ ಸಂಸ್ಥೆ ಹಮ್ಮಿಕೊಂಡಿರುವ ನಗರದ ಎಲ್ಲ ಪೊಲೀಸ್‌ ಠಾಣೆಗಳ ಹಸಿರೀಕರಣ ಕಾರ್ಯಕ್ರಮ ಗುರುವಾರ ಆರಂಭಗೊಂಡಿತು.

ಸಂಘಟನೆಯ ಕಾರ್ಯಕರ್ತರು ಇಲ್ಲಿನ ಪಟ್ಟಣ ಹಾಗೂ ಗ್ರಾಮೀಣ ಪೊಲೀಸ್‌ ಠಾಣೆ ಆವರಣದಲ್ಲಿ ಸಸಿ ನೆಟ್ಟು ಹಸಿರೀಕರಣ ಕಾರ್ಯಕ್ರಮ ಆರಂಭಿಸಿದರು. ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಎಂ. ಶ್ರೀನಿವಾಸ್‌, ಮೇಟಿ ಶ್ರೀನಿವಾಸ್‌ ಅವರಿಗೆ ಸಾಂಕೇತಿಕವಾಗಿ ಸಸಿ ವಿತರಿಸಿದರು.

ಸಂಘಟನೆಯ ಅಧ್ಯಕ್ಷ ಕೆ.ಸುನೀಲ್‍ಗೌಡ ಮಾತನಾಡಿ, ‘ನಗರದ ಎಲ್ಲಾ ಸರ್ಕಾರಿ ಕಚೇರಿಗಳ ಹಸಿರೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಪೊಲೀಸ್‌ ಠಾಣೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಂತ ಹಂತವಾಗಿ ಎಲ್ಲ ಸರ್ಕಾರಿ ಕಚೇರಿಗಳಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.

ಪೋಲಿಸ್ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ್, ‘ಹಸಿರೀಕರಣ ಕಾರ್ಯಕ್ರಮವೂ ಒಳ್ಳೆಯ ಉದ್ದೇಶ ಹೊಂದಿದೆ. ಇದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ. ಶುದ್ಧ ಗಾಳಿ ಸಿಗಲಿದೆ’ ಎಂದು ತಿಳಿಸಿದರು.

ಇನ್‌ಸ್ಪೆಕ್ಟರ್‌ ಎಂ.ಶ್ರೀನಿವಾಸ್ ಮಾತನಾಡಿ, ‘ಈ ಕಾರ್ಯಕ್ರಮದಿಂದ ಇಡೀ ನಗರ ಹಸಿರುಮಯವಾಗಲಿದೆ. ಇದಕ್ಕೆ ಎಲ್ಲರೂ ಸಹಕಾರ ಕೊಡಬೇಕಿದೆ’ ಎಂದರು. ಸಂಘಟನೆಯ ರವಿಜೈನ್, ಶಾಂತೇಶ್ ಕುಮಾರ್, ಪ್ರಕಾಶ್ ಶರ್ಮಾ, ರಾಘವೇಂದ್ರ, ಗಣೇಶ್, ರೆಬೆಕಾ, ವಿನಯಕುಮಾರ್, ಅಭಿಷೇಕ್, ಸತ್ಯ, ಸಿದ್ದು, ಶಿವುಕುಮಾರ್, ಪ್ರಜ್ವಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು