ಜು.7ರಿಂದ ಹಜ್‌ ಯಾತ್ರಿಕರಿಗೆ ಶಿಬಿರ

7

ಜು.7ರಿಂದ ಹಜ್‌ ಯಾತ್ರಿಕರಿಗೆ ಶಿಬಿರ

Published:
Updated:
ಹೊಸಪೇಟೆಯಲ್ಲಿ ನಡೆದ ಸಭೆಯಲ್ಲಿ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿದರು

ಹೊಸಪೇಟೆ: ಹಜ್‌ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆ ನಗರದ ಪರ್ವೇಜ್‌ ಪ್ಲಾಜಾದಲ್ಲಿ ಸೋಮವಾರ ನಡೆಯಿತು.

ಅಂಜುಮನ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಜು. 7, 8ರಂದು ನಡೆಯಲಿರುವ ಶಿಬಿರದಲ್ಲಿ ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ 1,250 ಹಜ್‌ ಯಾತ್ರಾರ್ಥಿಗಳ ಪಾಲ್ಗೊಳ್ಳುವರು. ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಒಟ್ಟು 15 ಸಮಿತಿಗಳನ್ನು ರಚಿಸಲಾಗಿದೆ’ ಎಂದರು.

‘ಹಜ್‌ ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು, ತುರ್ತು ಪರಿಸ್ಥಿತಿಯಲ್ಲಿ ಯಾರನ್ನೂ ಸಂಪರ್ಕಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ತಿಳಿವಳಿಕೆ ಮೂಡಿಸಲಾಗುವುದು’ ಎಂದು ಹೇಳಿದರು. ಸಭೆಯಲ್ಲಿ ಬಿ.ಕಾಂ. ಮಾಬುಸಾಬ್‌, ಖದೀರ್‌ಸಾಬ್‌, ಅನ್ಸರ್‌ ಬಾಷಾ, ಬಿ. ಬಾಷಾ, ದಾದಾಪೀರ್‌ ಬಾವಾ, ಫಹೀಮ್‌ ಬಾಷಾ, ಫೈರೋಜ್‌, ಫಜಲ್‌ ಅಲಿ, ಮೊಹಮ್ಮದ್‌ ಗೌಸ್‌, ಮೊಹಮ್ಮದ್‌ ರಿಯಾಜ್‌, ಅಮೀರ್‌, ತಬರೇಜ್‌, ಮುಶೀರ್‌, ಡಾ. ಹಬೀಬುಲ್ಲಾ, ಅಬುಲ್‌ ಕಲಾಂ, ಯಾಯಾ ಪಾಶಾ, ಅಕ್ರಂ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !