ಹಜ್‌ ತರಬೇತಿ ಶಿಬಿರಕ್ಕೆ ತೆರೆ

7

ಹಜ್‌ ತರಬೇತಿ ಶಿಬಿರಕ್ಕೆ ತೆರೆ

Published:
Updated:
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ ಡಾ. ಸೈಯದ್‌ ನಾಸೀರ್‌ ಹುಸೇನ್‌ ಮಾತನಾಡಿದರು

ಹೊಸಪೇಟೆ: ಹಜ್‌ ಯಾತ್ರೆ ಕೈಗೊಳ್ಳುವವರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಶಿಬಿರಕ್ಕೆ ಭಾನುವಾರ ರಾತ್ರಿ ತೆರೆ ಬಿತ್ತು.

ನಗರದ ಪೂಲ್‌ ಬನ್‌ ಉರ್ದು ಶಾಲೆಯಲ್ಲಿ ಶನಿವಾರದಿಂದ ಆರಂಭಗೊಂಡಿದ್ದ ಶಿಬಿರದಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನ ಪಾಲ್ಗೊಂಡಿದ್ದರು.

ಹಜ್‌ ಯಾತ್ರೆ ಸಂದರ್ಭದಲ್ಲಿ ಅಲ್ಲಿ ಅನುಸರಿಸಬೇಕಾದ ನಿಯಮಗಳು, ಅಲ್ಲಿನ ಕಾನೂನುಗಳು ಸೇರಿದಂತೆ ಒಟ್ಟು 40 ದಿನಗಳ ಯಾತ್ರೆಯ ಅವಧಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸಿಕೊಡಲಾಯಿತು.

ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಸಭಾ ಸದಸ್ಯ ಡಾ. ಸೈಯದ್‌ ನಾಸೀರ್‌ ಹುಸೇನ್‌, ‘ಹಜ್‌ ಸಮಿತಿಯು ರಾಜ್ಯದ ವಿವಿಧ ಕಡೆ ಇಂಥಹ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರಿಂದ ಯಾತ್ರಿಕರಿಗೆ ಬಹಳ ಅನುಕೂಲವಾಗುತ್ತಿದೆ. ಹಿಂದೆ ಯಾವುದೇ ತಿಳಿವಳಿಕೆ ಇಲ್ಲದೇ ಹಜ್‌ ಪ್ರವಾಸ ಕೈಗೊಂಡು ಅಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಈಗ ಅದು ದೂರವಾಗಿದೆ’ ಎಂದು ಹೇಳಿದರು.

‘ಹಜ್‌ ಯಾತ್ರೆ ಕೈಗೊಳ್ಳುವವರಿಗೆ ಸರ್ಕಾರ ಅನೇಕ ರೀತಿಯ ಸವಲತ್ತುಗಳನ್ನು ಕಲ್ಪಿಸುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ದೇಶದಲ್ಲಿ ಮಳೆ, ಬೆಳೆಯಾಗಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಬೇಕು’ ಎಂದು ಕೋರಿದರು.

ಅಂಜುಮನ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ಪ್ರಮುಖರಾದ ಏಜಾಜ್‌ ಅಹಮ್ಮದ್‌, ಮೌಲಾನಾ ಸೈಫುಲ್ಲಾ ಮಹಜಾನ್‌ ರಶೀದ್‌, ಸೈಯದ್‌ ರಿಯಾಜ್‌ ಸಾಹೇಬ್‌, ನಾಜಿಮುದ್ದೀನ್‌ ಸಾಬ್‌, ಬಿ. ಅನ್ಸರ್‌ ಬಾಷಾ, ದಾದಾ ಪೀರ್‌, ಹುಸೇನ್‌, ಜಫ್ರುಲ್ಲಾ ಖಾನ್‌, ನಾಸೀರ್‌, ರಜಾಕ್‌, ಅಬ್ದುಲ್‌ ಖದೀರ್‌, ಅಬುಲ್‌ ಸೇಠ್‌, ಫಹೀಮ್‌ ಬಾಷಾ, ಕೆ.ಎಸ್‌. ದಾದಾಪೀರ್‌, ತಾಹೀರ್‌ ಸಾದಿಕ್‌, ತಬರೇಜ್‌ ಇಸ್ಮಾಯಿಲ್‌, ಮೊಹಮ್ಮದ್‌ ರಿಯಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !