ಹಂಪಿ-ಬೆಂಗಳೂರು ಪಾದಯಾತ್ರೆ : ಶಾಸಕ ರೆಡ್ಡಿ

7
ನಿಗದಿತ ದಿನದಂದು ಹಂಪಿ ಉತ್ಸವ ಆಚರಿಸಲಿ

ಹಂಪಿ-ಬೆಂಗಳೂರು ಪಾದಯಾತ್ರೆ : ಶಾಸಕ ರೆಡ್ಡಿ

Published:
Updated:

ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವವನ್ನು ಜಿಲ್ಲಾಡಳಿತ ನಿಗದಿ ಮಾಡಿದ್ದ ದಿನಾಂಕದಂದೇ ಆಚರಿಸದಿದ್ದಲ್ಲಿ ಹಂಪಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ಹಾಗೂ ಇಂಧನದ ಮೇಲಿನ ತೆರಿಗೆ ಕೈ ಬಿಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಣೆಯಲ್ಲಿ ಅನವಶ್ಯಕ ಮೀನಮೇಶ ಎಣಿಸುತ್ತಿದೆ. ಜಿಲ್ಲಾಡಳಿತ ನಿಗದಿಸಿದ್ದ ಜ.12, 13ರಂದು ಉತ್ಸವ ಆಚರಿಸದಿದ್ದರೆ, ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ನಾವು ಭಿಕ್ಷೆ ಬೇಡಿ ಹಂಪಿ ಉತ್ಸವ ಆಚರಿಸಲು ಮುಂದಾಗಿದ್ದೆವು. ಆದರೆ, ರಾಜ್ಯ ಸರ್ಕಾರದಿಂದ ಉತ್ಸವ ಆಚರಿಸುತ್ತೇವೆ ಎಂದು ಹೇಳಿ ಇದೀಗ ಕಡೆಗಣಿಸುತ್ತಿದ್ದಾರೆ. ಇದು ಜಿಲ್ಲೆಯ ಕಲಾವಿದರಲ್ಲಿ ಅತೀವ ಬೇಸರ ಮೂಡಿಸಿದೆ ಎಂದರು.

ಸಂಕ್ರಾಂತಿ ನಂತರ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಎಲ್ಲವೂ ಜೈ ಶ್ರೀರಾಮ್ ಎಂದು ಆಕಾಶದತ್ತ ಮುಖ ಮಾಡಿ ಕೈ ಮುಗಿದು ಹೊರಟೆಬಿಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನಗೌಡ, ದೋಸ್ತಿಗಳು ಉತ್ಸವ ಆಚರಿಸಿದರೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರವೇ ಮುಖ್ಯವಾಗಿದೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !