ಹಂಪಿ ಜೋಡಿ ರಥೋತ್ಸವಕ್ಕೆ ಜನಸಾಗರ

ಬುಧವಾರ, ಮೇ 22, 2019
24 °C

ಹಂಪಿ ಜೋಡಿ ರಥೋತ್ಸವಕ್ಕೆ ಜನಸಾಗರ

Published:
Updated:
Prajavani

ಹೊಸಪೇಟೆ: ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ತಾಲ್ಲೂಕಿನ ಹಂಪಿ ರಥಬೀದಿಯಲ್ಲಿ ಶುಕ್ರವಾರ ಸಂಜೆ ಅಪಾರ ಜನಸ್ತೋಮದ ನಡುವೆ ನೆರವೇರಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ತೇರು ಎಳೆದರು. ರಥಬೀದಿಯಲ್ಲಿ ಆನೆ ಲಕ್ಷ್ಮಿ ಮುಂದೆ ಮುಂದೆ ಹೆಜ್ಜೆ ಹಾಕಿದರೆ, ಅದರ ಹಿಂದೆ ತೇರುಗಳನ್ನು ಭಕ್ತರು ಎಳೆದರು. ರಥಬೀದಿಯ ಎರಡೂ ಕಡೆ ನಿಂತಿದ್ದ ಜನ ತೇರುಗಳಿಗೆ ಉತ್ತತ್ತಿ, ಬಾಳೆಹಣ್ಣು, ಹೂ ಎಸೆದು ಭಕ್ತಿ ಸರ್ಮಪಸಿದರು. ಅಲ್ಲಿಂದಲೇ ಕೈಮುಗಿದು ಧನ್ಯತೆಯ ಭಾವ ಮೆರೆದರು.

ಈ ಕ್ಷಣಕ್ಕೆ ವಿದೇಶಿಯರು ಕೂಡ ಸಾಕ್ಷಿಯಾದರು. ಸ್ಥಳೀಯರೊಂದಿಗೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು. ತೇರುಗಳು ಮೂಲ ಸ್ಥಾನಕ್ಕೆ ಹಿಂತಿರುಗುವಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ‘ವಿರೂಪಾಕ್ಷೇಶ್ವರ ಸ್ವಾಮಿ’, ಚಂದ್ರಮೌಳೇಶ್ವರ ಸ್ವಾಮಿ’ಗೆ ಜಯವಾಗಲಿ ಎಂದು ಘೊಷಣೆಗಳನ್ನು ಕೂಗಿದರು. ರಥಬೀದಿಯಲ್ಲಿ ಜನ ನಿಲ್ಲುವುದಕ್ಕೆ ಜಾಗ ಸಾಲಲಿಲ್ಲ. ಇದರಿಂದಾಗಿ ಅನೇಕ ಜನ ಗುಡ್ಡ, ಬಂಡೆಗಲ್ಲುಗಳ ಮೇಲೆ ಕುಳಿತುಕೊಂಡು ರಥೋತ್ಸವ ಕಣ್ತುಂಬಿಕೊಂಡರು.

ರಥೋತ್ಸವಕ್ಕೂ ಮುನ್ನ ಧ್ವಜ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ನರಗುಂದ ತಾಲ್ಲೂಕಿನ ಕೊಣ್ಣುರು ಗ್ರಾಮದ ಮಹಾಲಿಂಗಪ್ಪ ವಿರೂಪಾಕ್ಷಪ್ಪ ಚಿನಿವಾಲರು ₹76 ಸಾವಿರಕ್ಕೆ ವಿರೂಪಾಕ್ಷೇಶ್ವರ ಸಹಿತ ಪಂಪಾಂಬಿಕೆ ಧ್ವಜ, ಹಂಪಿಯ ಗುರುನಾಥ ಮೋಹನ್‌ ಜೋಷಿಯವರು ₹51 ಸಾವಿರಕ್ಕೆ ವಿದ್ಯಾರಣ್ಯ ಸಹಿತ ಚಂದ್ರಮೌಳೇಶ್ವರ ಧ್ವಜ ತಮ್ಮದಾಗಿಸಿಕೊಂಡರು. 

ಬೆಳಿಗ್ಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ವಿರೂಪಾಕ್ಷೇಶ್ವರ, ಚಂದ್ರಮೌಳೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿರೂಪಾಕ್ಷ ದೇವರಿಗೆ ಚಿನ್ನದ ಮುಕುಟ ಹಾಕಿ ಪೂಜಿಸಲಾಯಿತು. ಬಳಿಕ ಮಡಿತೇರು ನಡೆಯಿತು.

ದೇವರ ದರ್ಶನ ಹಾಗೂ ರಥೋತ್ಸವಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಯ ಜನ ಬಂದಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ಹಂಪಿಯಲ್ಲಿ ದಿನವಿಡೀ ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಂಡಿತ್ತು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !