ಪ್ರೇಕ್ಷಣೀಯ ಸ್ಥಳಗಳಲ್ಲಿ ಹಂಪಿಗಿಲ್ಲ ಸ್ಥಾನ!

7
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಕ್ರಮಕ್ಕೆ ವಿರೋಧ

ಪ್ರೇಕ್ಷಣೀಯ ಸ್ಥಳಗಳಲ್ಲಿ ಹಂಪಿಗಿಲ್ಲ ಸ್ಥಾನ!

Published:
Updated:
Deccan Herald

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ದೇಶದಲ್ಲಿ 98 ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿದ್ದು, ಆ ಪಟ್ಟಿಯಿಂದ ವಿಶ್ವವಿಖ್ಯಾತ ಹಂಪಿಯನ್ನು ಕೈಬಿಟ್ಟಿದೆ.

ಎ.ಎಸ್‌.ಐ.ನ ಈ ಕ್ರಮಕ್ಕೆ ಇತಿಹಾಸಕಾರರು ಹಾಗೂ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹಂಪಿಯ ಉತ್ಕೃಷ್ಟ ವಾಸ್ತುಶಿಲ್ಪವನ್ನು ನೋಡಿ ಯುನೆಸ್ಕೊ, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಿದೆ. ಹೀಗಿರುವಾಗ ನಮ್ಮವರೇ ಅದನ್ನು ಕಡೆಗಣಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

‘ಪ್ರೇಕ್ಷಣೀಯ ಪಟ್ಟಿಗಳಲ್ಲಿ ಸೇರಿಸಿರುವ 98 ಸ್ಥಳಗಳಷ್ಟೇ ಹಂಪಿಗೂ ಪ್ರಾಮುಖ್ಯತೆ ಇದೆ. ಅನೇಕ ವರ್ಷಗಳಿಂದ ನಿತ್ಯ ದೇಶ–ವಿದೇಶಗಳಿಂದ ಸಾವಿರಾರು ಜನ ಹಂಪಿಗೆ ಬಂದು ಹೋಗುತ್ತಾರೆ. ಹಂಪಿಯ ಮಹತ್ವ ಕುರಿತು ಈಗಿನ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ಅವರೇ ಸಂಸತ್ತಿನಲ್ಲಿ ಮಾತನಾಡಿದ್ದರು. ಹೀಗಿರುವಾಗ ಹೆಸರು ಬಿಟ್ಟು ಹೋಗಿರುವುದು ಸರಿಯಲ್ಲ. ಪಟ್ಟಿಯಲ್ಲಿ ಹೆಸರಿರದಿದ್ದರೂ ಹಂಪಿಯ ಪ್ರಾಮುಖ್ಯತೆ ಕಮ್ಮಿಯಾಗಲ್ಲ’ ಎಂದು ಇತಿಹಾಸ ತಜ್ಞ ವಿಜಯ ಪೂಣಚ್ಚ ತಂಬಂಡ ಹೇಳಿದರು.

‘ಜಗತ್ತಿನಲ್ಲಿ ಹಂಪಿಯಂತಹ ಮತ್ತೊಂದು ಸ್ಥಳ ಬೇರೆ ಇಲ್ಲ. ಈ ಮಾತನ್ನು ವಿದೇಶಿ ಇತಿಹಾಸಕಾರರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ದೇಶದ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಿಂದ ಹಂಪಿಯನ್ನು ಕೈಬಿಟ್ಟಿರುವುದು ಅಕ್ಷಮ್ಯ. ಇದು ರಾಜ್ಯಕ್ಕೆ ಆಗಿರುವ ದೊಡ್ಡ ಅನ್ಯಾಯ. ಹಂಪಿಯ ಬಗೆಗೆ ಅಧಿಕಾರಿಗಳಿಗೆ ಇರುವ ತಾತ್ಸಾರ ಇದು’ ಎಂದು ಇತಿಹಾಸ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಸಾಹಿತಿ ಮೃತ್ಯುಂಜಯ ರುಮಾಲೆ ಪ್ರತಿಕ್ರಿಯಿಸಿ, ‘ಯಾವ ಉದ್ದೇಶಕ್ಕೆ ಹಂಪಿಯನ್ನು ಕೈಬಿಡಲಾಗಿದೆ ಎಂಬುದು ಸ್ಪಷ್ಟವಾಗಬೇಕು. ನಂತರ ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡಿ, ಪುನಃ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಶ್ರಮಿಸಬೇಕು. ಇಲ್ಲವಾದರೆ ಅಷ್ಟೊಂದು ದೊಡ್ಡ ಶ್ರೀಮಂತ ಪರಂಪರೆಗೆ ಅಪಚಾರ ಬಗೆದಂತಾಗುತ್ತದೆ’ ಎಂದು ಹೇಳಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !