ಭಾನುವಾರ, ಮಾರ್ಚ್ 29, 2020
19 °C

31ರವರೆಗೆ ಹಂಪಿ ಸ್ಮಾರಕ ವೀಕ್ಷಣೆಗಿಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ಹಂಪಿ ಸ್ಮಾರಕಗಳಿಗೆ ಪ್ರವಾಸಿಗರ ಭೇಟಿ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ತಿಳಿಸಿದ್ದಾರೆ.

‘ಈಗಾಗಲೇ ಪ್ರವಾಸಿಗರಿಗೆ ಹಂಪಿ ಸ್ಮಾರಕಗಳ ಭೇಟಿ ಮೇಲೆ ನಿರ್ಬಂಧ ಹೇರಲಾಗಿದೆ. ಟಿಕೆಟ್‌ ಕೌಂಟರ್‌ಗಳು ಬಂದ್‌ ಆಗಿವೆ. ಮಾ. 22ರ ವರೆಗೆ ಇದ್ದ ಈ ನಿರ್ಬಂಧವನ್ನು ಈ ತಿಂಗಳಾಂತ್ಯದ ವರೆಗೆ ವಿಸ್ತರಿಸಲಾಗಿದೆ. ಕೆಲವು ಸ್ಮಾರಕಗಳಿಗೆ ಬೀಗ ಜಡಿಯಲಾಗಿದೆ. ಕೆಲವು ಸ್ಮಾರಕಗಳು ಬಯಲಲ್ಲೇ ಇವೆ.

ಅವುಗಳ ವೀಕ್ಷಣೆ, ಛಾಯಾಚಿತ್ರ ತೆಗೆಯುವುದು ಸೇರಿದಂತೆ ಎಲ್ಲಾ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು