ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ಥಳಿ ಬದಲು ಗ್ರಂಥಾಲಯ ನಿರ್ಮಿಸಿ: ಸ್ವಾಮೀಜಿ ಸಲಹೆ

ಪುತ್ಥಳಿಗಳ ಹೆಸರಲ್ಲಿ ಕೆಲವವರಿಂದ ಜಾತಿ ಗಲಭೆ, ಸಂಘರ್ಷ
Last Updated 13 ಮೇ 2022, 2:51 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ): ‘ಪುತ್ಥಳಿಗಳಿಂದಸಮಾಜದ ಸಾಮರಸ್ಯ ಕದಡುತ್ತಿದ್ದು, ಅದರ ಬದಲು ಗ್ರಂಥಾಲಯ ನಿರ್ಮಿಸಲು ಮುಂದಾಗಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಮಾದಾಪುರ ಗ್ರಾಮ
ದಲ್ಲಿ ಗುರುವಾರ ಆಯೋಜಿಸಿದ್ದ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮದ ಬಳಿಕ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧಿ, ಅಂಬೇಡ್ಕರ್‌, ಬಸವಣ್ಣ, ಕನಕದಾಸ, ರಾಯಣ್ಣ, ವಾಲ್ಮೀಕಿ ಸೇರಿದಂತೆ ಅನೇಕ ಮಹನೀ
ಯರ ಬಗ್ಗೆ ಅಪಾರ ಗೌರವವಿದೆ. ಆದರೆ, ಸಾಮರಸ್ಯದ ಸಂಕೇತವಾಗಿರುವ ನಾಯಕರ ಪುತ್ಥಳಿಗಳ ಹೆಸರಲ್ಲಿ ಕೆಲ
ವರು ಜಾತಿ ಗಲಭೆ ಉಂಟು ಮಾಡುತ್ತಿ
ರುವುದು ಬೇಸರ ಮೂಡಿಸಿದೆ’ಎಂದರು.

‘ಬಳ್ಳಾರಿ ಜಿಲ್ಲೆ ಸಂಡೂರು ಸಮೀಪದ ಹಳ್ಳಿಯೊಂದರಲ್ಲಿ ಕನಕ ಮೂರ್ತಿ ಪ್ರತಿಷ್ಠಾಪಿಸಲು ಮುಂದಾದ ಐವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ
ಯಲ್ಲಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಘಟನೆ ನಂತರ ಎರಡು ದಿನ ಅಧಿವೇಶನದಲ್ಲಿ ಚರ್ಚೆ
ನಡೆಸಿದ್ದು ಇವೆಲ್ಲ ಯಾವ ಪುರುಷಾ
ರ್ಥಕ್ಕೆ’ ಎಂದು ಅವರು ಪ್ರಶ್ನಿಸಿದರು.

‘ಇಂತಹ ಜಾತಿ ಗಲಭೆಗಳಿಂದ ನಿತ್ಯ ನಾನು ಪೊಲೀಸ್ ಅಧಿಕಾರಿಗಳೊಟ್ಟಿಗೆ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ.6 ತಿಂಗಳಿನಿಂದ ಯಾವುದೇ ಪುತ್ಥಳಿ ಅನಾವರಣಕ್ಕೆ ಹೋಗದಿರಲು ನಿರ್ಧರಿಸಿದ್ದೆ. ಒಂದು ವೇಳೆ ದಾರ್ಶನಿಕರ ಪುತ್ಥಳಿ ನಿರ್ಮಿಸುವುದಾದರೆ ಸಂಬಂಧಪಟ್ಟ ಇಲಾಖೆ ಅನು
ಮತಿ ಪಡೆದು ನಿರ್ಮಿಸಿ, ಅಷ್ಟೇ ಕಾಳಜಿ
ಯಿಂದ ಸಂರಕ್ಷಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT