ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಎಎಸ್‌ಸಿಗೆ ಜಯ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಎಸ್‌ಸಿ ಮತ್ತು ಸೆಂಟರ್ ಎಫ್‌ಸಿ ತಂಡ ಭಾನುವಾರ ಇಲ್ಲಿ ನಡೆದ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಫುಟ್‌ಬಾಲ್‌ ಪಂದ್ಯದಲ್ಲಿ ಜಯದಾಖಲಿಸಿದೆ.

ಅಶೋಕನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಎಸ್‌ಸಿ ಮತ್ತು ಸೆಂಟರ್‌ 3–1 ಗೋಲುಗಳಿಂದ ಸಿಐಎಲ್‌ ಎಫ್‌ಸಿಗೆ ಸೋಲುಣಿಸಿತು. ವಿಜಯೀ ತಂಡದ ತಿರುವಾಂಕರಸು (67ನೇ ನಿ.), ನೀರಜ್ (69ನೇ ನಿ.), ಸುಮಾನಂದ (75ನೇ ನಿ.) ತಲಾ ಒಂದು ಗೋಲು ತಂದಿತ್ತರು.

ಸಿಐಎಲ್ ತಂಡದ ಕವಿ ಅರಸನ್‌ (88ನೇ ನಿ.) ಏಕೈಕ ಗೋಲು ದಾಖಲಿಸಿದರು.

‘ಎ’ ಡಿವಿಷನ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 1–0 ಗೋಲಿನಿಂದ ಯಂಗ್ ಚಾಲೆಂಜರ್ಸ್ ಎದುರು ಗೆದ್ದಿತು. ಮಣಿವಣ್ಣನ್‌ 31ನೇ ನಿಮಿಷದಲ್ಲಿ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT