22ರಿಂದ ಗೃಹ, ವಾಹನ ಸಾಲ ಮೇಳ

7
ಎಸ್‌.ಬಿ.ಐ. ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಿ ನಾರಾಯಣ ಹೇಳಿಕೆ

22ರಿಂದ ಗೃಹ, ವಾಹನ ಸಾಲ ಮೇಳ

Published:
Updated:

ಹೊಸಪೇಟೆ: ‘ನಗರದ ಸ್ಟೇಶನ್‌ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕಿನ ಎದುರು ಇದೇ 22 ಹಾಗೂ 23ರಂದು ಗೃಹ ಮತ್ತು ವಾಹನ ಸಾಲ ಮೇಳ ಆಯೋಜಿಸಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಿ ನಾರಾಯಣ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎರಡೂ ದಿನ ಬೆಳಿಗ್ಗೆ 9.30ರಿಂದ ರಾತ್ರಿ 8.30ರ ವರೆಗೆ ಮೇಳ ನಡೆಯಲಿದೆ. ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲ ಶಾಖೆಗಳಿಗೆ ಒಳಪಡುವವರು ಭಾಗವಹಿಸಬಹುದು’ ಎಂದು ಮಾಹಿತಿ ನೀಡಿದರು.

‘ನಿವೇಶನ, ಮನೆ ನಿರ್ಮಾಣ ಹಾಗೂ ನಾಲ್ಕು ಚಕ್ರದ ವಾಹನಗಳ ಖರೀದಿಗೆ ಸಾಲ ಸೌಲಭ್ಯ ನೀಡಲಾಗುವುದು. ತಲಾ ವರಮಾನ ಹಾಗೂ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ನೋಡಿಕೊಂಡು ಸ್ಥಳದಲ್ಲೇ ತಾತ್ವಿಕ ಒಪ್ಪಿಗೆ ನೀಡಲಾಗುವುದು. ಅನಂತರ ಎಲ್ಲ ದಾಖಲೆಗಳನ್ನು ಪ್ರಸ್ತುತಪಡಿಸಿದರೆ ವಾರದೊಳಗೆ ಸಾಲ ಮಂಜೂರು ಮಾಡಲಾಗುವುದು’ ಎಂದು ಹೇಳಿದರು.

‘ಗೃಹ ಸಾಲಕ್ಕೆ 8.40ರಿಂದ 8.70ರಷ್ಟು ಬಡ್ಡಿ, ವಾಹನ ಸಾಲವನ್ನು ಶೇ 9.02ರಿಂದ 9.70ರ ಬಡ್ಡಿಯಲ್ಲಿ ನೀಡಲಾಗುವುದು. ಮಹಿಳೆಯರಿಗೆ 0.05ರ ಬಡ್ಡಿಯಲ್ಲಿ ರಿಯಾಯಿತಿ ಕೊಡಲಾಗುವುದು. ಮೇಳದ ದಿನದ ಎಲ್ಲ ವಾಹನ ಕಂಪನಿಗಳ ಡೀಲರ್‌ಗಳು ಆ ದಿನ ಉಪಸ್ಥಿತರಿದ್ದು, ಮಾಹಿತಿ ಕೊಡುವರು’ ಎಂದರು.

ಬ್ಯಾಂಕಿನ ಸಾಲ ಮತ್ತು ಸುಸ್ತಿ ಸಾಲದ ಮುಖ್ಯ ವ್ಯವಸ್ಥಾಪಕ ಅನಂತ ಹಳಿಯಾಳ, ಎಸ್‌.ಬಿ.ಐ. ಬಸ್‌ ನಿಲ್ದಾಣ ಶಾಖೆಯ ಮುಖ್ಯ ವ್ಯವಸ್ಥಾಪಕ ವಿನಾಯಕ ದೇಶಪಾಂಡೆ, ಸ್ಟೇಶನ್‌ ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕ ಟಿ.ಕೆ. ಪೈಟೆ, ವ್ಯವಸ್ಥಾಪಕ ಪಂಪಾಪತಿ, ಸಹ ಮುಖ್ಯಸ್ಥ ಗುಣಲನ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !