ಭಾನುವಾರ, ಮಾರ್ಚ್ 29, 2020
19 °C

ಹೊಸಪೇಟೆ| ಮಾರುಕಟ್ಟೆಗೆ ಬಂದವರಿಗೆ ಬೆತ್ತದ ಏಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನಿಷೇಧಾಜ್ಞೆ ನಡುವೆಯೂ ಗುಂಪು ಗುಂಪಾಗಿ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ ಬಂದಿದ್ದ ಜನರಿಗೆ ಬೆತ್ತದ ಏಟು ಕೊಟ್ಟು ಕಳುಹಿಸಿದರು.

ಮನೆಯಿಂದ ಹೊರಗೆ ಬರದಂತೆ ಬೆಳಿಗ್ಗೆ ಪೊಲೀಸರು ಧ್ವನಿವರ್ಧಗಳ ಮೂಲಕ ಪ್ರಚಾರ ಕೈಗೊಂಡು ಮನವಿ ಮಾಡಿದ್ದರು. ಆದರೆ, ಅದನ್ನು ಲೆಕ್ಕಿಸದೆ ಖರೀದಿಗೆ ಮಾರುಕಟ್ಟೆಗೆ ಬಂದಿದ್ದರು. ಜನರ ದಟ್ಟಣೆ ಹೆಚ್ಚಾಗಿರುವುದನ್ನು ಗಮನಿಸಿದ ಪೊಲೀಸರು ಲಾಠಿಯಿಂದ ಹೊಡೆದು ಅವರನ್ನು ಚದುರಿಸಿದರು. ನಗರದ ತುಂಬೆಲ್ಲಾ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸಕಾರವಿಲ್ಲದೆ ರಸ್ತೆ ಬಂದರೆ ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮಂಗಳವಾರ ಐದು ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಹತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ‌ ತೆಗೆದುಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು