ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ರೈಲು ನಿಲ್ದಾಣಕ್ಕೆ ಪಾರಂಪರಿಕ ಸ್ಪರ್ಶ

ಹಂಪಿ ಕಲ್ಲಿನ ರಥದ ಮಾದರಿಯಲ್ಲಿ ಸುಂದರ ಪ್ರವೇಶ ದ್ವಾರ ನಿರ್ಮಾಣ
Last Updated 21 ಮಾರ್ಚ್ 2022, 9:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ರೈಲು ನಿಲ್ದಾಣಕ್ಕೆ ಪಾರಂಪರಿಕ ಸ್ಪರ್ಶ ನೀಡುವುದರ ಮೂಲಕ ಹೊಸ ರೂಪ ಕೊಡಲಾಗಿದೆ.

ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ಹಂಪಿ ಕಲ್ಲಿನ ರಥದ ಮಾದರಿಯಲ್ಲಿ ನಿರ್ಮಿಸಿರುವುದು ವಿಶೇಷ. ಇನ್ನು, ಸುಂದರ ಕೆತ್ತನೆಯ ಕಲ್ಲುಗಳನ್ನು ಬಳಸಿಕೊಂಡು ಕಟ್ಟಡ ನಿರ್ಮಿಸಿರುವುದರಿಂದ ಪಾರಂಪರಿಕ ಶೈಲಿಯ ಕಟ್ಟಡದಂತೆ ಭಾಸವಾಗುತ್ತಿದೆ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ.

ಟಿಕೆಟ್‌ ಕೌಂಟರ್‌, ರಿಟೈರಿಂಗ್‌ ರೂಂ, ಒಳ ಆವರಣ, ನಿಲ್ದಾಣ ಎದುರಿನ ಪ್ರದೇಶ, ಪಾರ್ಕಿಂಗ್‌ ಸ್ಥಳವನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಹಿಂದಿಗಿಂತ ಹೆಚ್ಚು ವಾಹನಗಳ ನಿಲುಗಡೆಗೆ ವ್ಯವಸ್ಥೆಗೆ ಮಾಡಿರುವುದು ವಿಶೇಷ.

ಐಪಿಐಎಸ್‌ ಜಾರಿ:ರೈಲು ನಿಲ್ದಾಣದಲ್ಲಿ ‘ಇಂಟಿಗ್ರೇಟೆಡ್‌ ಪ್ಯಾಸೆಂಜರ್‌ ಇನ್‌ಫಾರ್ಮೆಶನ್‌ ಸಿಸ್ಟಮ್‌’ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದೆ. ಈ ವ್ಯವಸ್ಥೆಯಿಂದಾಗಿ ರೈಲಿನ ಆಗಮನ, ನಿರ್ಗಮನ, ಪ್ಲಾಟ್‌ಫಾರಂ ಸಂಖ್ಯೆ, ರೈಲು ಕೋಚಿನ ನಿರ್ದಿಷ್ಟ ಸ್ಥಳವನ್ನು ತಿಳಿದುಕೊಳ್ಳಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನಿಲ್ದಾಣದ 1,2 ಮತ್ತು 3ನೇ ಪ್ಲಾಟ್‌ಫಾರಂನಲ್ಲಿ ಎಲೆಕ್ಟ್ರಾನಿಕ್‌ ಮಾರ್ಗದರ್ಶಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅದರ ಮೇಲಿನ ವಿವರ ನೋಡಿಕೊಂಡು ಪ್ರಯಾಣಿಕರು ನಿರ್ದಿಷ್ಟ ಸಂಖ್ಯೆಯ ಪ್ಲಾಟ್‌ಫಾರಂಗೆ ಸೂಕ್ತ ಸಮಯಕ್ಕೆ ತಲುಪಬಹುದು.

ನಿಲ್ದಾಣದ ಸೂಚನಾ ಫಲಕಗಳಲ್ಲಿ ಬರುವ ಮಾಹಿತಿಯೂ ‘ನ್ಯಾಷನಲ್‌ ಟ್ರೇನ್‌ ಇನ್‌ಕ್ವಾಯಿರಿ ಸಿಸ್ಟಮ್‌‘ (ಎನ್‌ಟಿಎಎಸ್‌) ಆ್ಯಪ್‌ನೊಂದಿಗೆ ಲಿಂಕ್‌ ಮಾಡಲಾಗಿದೆ. ನಿಲ್ದಾಣದ ಕ್ಷಣ ಕ್ಷಣದ ಮಾಹಿತಿಯನ್ನು ಆ್ಯಪ್‌ನಲ್ಲಿ ನೋಡಬಹುದು.

ಪ್ಲಾಟ್‌ಫಾರಂ ಮೇಲ್ದರ್ಜೆಗೆ:ಸರಕು ಮತ್ತು ಪ್ರಯಾಣಿಕ ರೈಲುಗಳು ಹೆಚ್ಚಾಗಿ ಓಡಾಟವಿರುವುದರಿಂದ ನಿಲ್ದಾಣದ ಪ್ಲಾಟ್‌ಫಾರಂ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಕೋವಿಡ್‌ ಲಾಕ್‌ಡೌನ್‌ನಲ್ಲಿ ಹಳಿಗಳನ್ನು ಬದಲಿಸಿ, ಹೊಸ ಸ್ಲೀಪರ್ಸ್‌ ಅಳವಡಿಸಲಾಗಿದೆ. ಇಡೀ ಆವರಣದಲ್ಲೆಲ್ಲಾ ಡಸ್ಟ್‌ ಬೀನ್‌ಗಳಿಗೆ ವ್ಯವಸ್ಥೆ ಮಾಡಿ ಸ್ವಚ್ಛತೆಗೆ ಒತ್ತು ಕೊಡಲಾಗಿದೆ. ಸ್ವಚ್ಛ, ಸುಂದರ ನಿಲ್ದಾಣವಾಗಿ ಕಂಗೊಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT