ಶೀಘ್ರ ವಸತಿ ಸೌಲಭ್ಯ: ರಾಜೇಂದ್ರ

7
ಮಂಗಳಮುಖಿಯರಿಗೆ ಕಾನೂನು ತರಬೇತಿ ಕಾರ್ಯಗಾರ

ಶೀಘ್ರ ವಸತಿ ಸೌಲಭ್ಯ: ರಾಜೇಂದ್ರ

Published:
Updated:
Deccan Herald

ಬಳ್ಳಾರಿ: ‘ಗ್ರಾಮೀಣ ಪ್ರದೇಶದ ಮಂಗಳಮುಖಿಯರಿಗೆ ಶೀಘ್ರ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಂಗಳಮುಖಿಯರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲಾ ಖನಿಜ ನಿಧಿಯಿಂದ ಮಂಗಳಮುಖಿಯರುಗೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ನೀಡಲಾಗುವುದು. ಆ ಅನುದಾನದಲ್ಲಿ ಪುನರ್ವಸತಿ ಕಲ್ಪಿಸಿ, ಸ್ವಯಂ ಉದ್ಯೋಗಕ್ಕೂ ತರಬೇತಿ ನೀಡಲಾಗುವುದು’ ಎಂದರು.

‘ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೆಲವರು ಮಾತ್ರ ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ. ಎಲ್ಲರೂ ಪಡೆದು ತಮ್ಮ ಗುರುತನ್ನು ಸಾಬೀತುಪಡಿಸಬೇಕು’ ಎಂದರು.

ಪ್ರೊ.ಮೋಹನ್ ದಾಸ್ ‘ನಿಮ್ಮ ಜೀವನ ಬದಲಾಗಲು ನೀವೇ ಹೋರಾಡಬೇಕು. ಬಾಡಿಗೆಗೆ ಮನೆ ಕೊಡದೇ ಸತಾಯಿಸುವ ಜನರ ಮನಸ್ಥಿತಿ ಬದಲಾಗುವಂತೆ ಉತ್ತಮ ಜೀವನ ನಡೆಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ , ‘ಮಕ್ಕಳ ಸಾಗಾಣಿಕೆಯಂಥಹ ಗಂಭೀರ ಆರೋಪಗಳಲ್ಲಿ ನಿಮ್ಮ ಪಾತ್ರದ ಬಗ್ಗೆ ಕೂಗು ಕೇಳಿ ಬರುತ್ತಿದೆ. ಅಂತಹ ಅಪರಾಧಗಳ ಬಗ್ಗೆ ಮಾಹಿತಿ ದೊರೆತರೂ ತಿಳಿಸಿ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಮಾತನಾಡಿದರು. ಅರ್ಧನಾರೀಶ್ವರ ಸಂಘದ ಅಧ್ಯಕ್ಷೆ ಎಸ್ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು.

ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಪಾಲಿಕೆ ಸದಸ್ಯೆ ಪರ್ವೀನ್ ಬಾನು, ಮಂಗಳಮುಖಿಯರಾದ ಲಕ್ಷ್ಮೀ, ಮಧುಶ್ರೀ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !