ಸೋಮವಾರ, ನವೆಂಬರ್ 18, 2019
27 °C

ಆಡಿಯೊ ಯಾರು ಮಾಡಿದರೆಂದು ಹೇಳಲು ನಾನೇನು ಅಂಜನ ಹಾಕುವುದಿಲ್ಲ: ಸಿ.ಟಿ ರವಿ

Published:
Updated:

ಹೊಸಪೇಟೆ: ‘ಬಿ.ಎಸ್‌. ಯಡಿಯೂರಪ್ಪನವರು ಅನರ್ಹ ಶಾಸಕರ ಕುರಿತು ಮಾತನಾಡಿರುವ ವಿಡಿಯೊ ಯಾರು ಮಾಡಿದ್ದಾರೆ ಎಂದು ಹೇಳುವುದಕ್ಕೆ ನಾನು ತನಿಖಾ ಏಜೆಂಟನಲ್ಲ. ನಾನು ಅಂಜನ ಹಾಕಿಲ್ಲ. ಅಂಜನ ಹಾಕೋ ಸಾಮರ್ಥ್ಯ ಇರೋದು, ಮೂಢನಂಬಿಕೆ ನಂಬಿರೋ ಕಾಂಗ್ರೆಸ್‌ನವರಿಗೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಮಂಗಳವಾರ ಸಂಜೆ ತಾಲ್ಲೂಕಿನ ಹಂಪಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಂಜನ ಹಾಕೋದಕ್ಕೆ ಬರುವ ಕಾಂಗ್ರೆಸ್‌ನವರು ಕೆಲವರ ಹೆಸರು ಹೇಳುತ್ತಿದ್ದಾರೆ. ಅವರನ್ನೇ ಈ ವಿಚಾರ ಕೇಳಿದರೆ ಒಳ್ಳೆಯದು’ ಎಂದರು.

‘ನಾನು ಸರ್ಕಾರದಲ್ಲಿ ಒಬ್ಬ ಸಚಿವ. ವಿಡಿಯೊ ಯಾವ ಕಾರಣಕ್ಕೆ ಲೀಕ್‌ ಆಯ್ತು ಎನ್ನುವುದು ಗೊತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಕುರಿತು ಹೆಚ್ಚಿಗೆ ಮಾತನಾಡಲಾರೆ’ ಎಂದು ಹೇಳಿದರು.

‘ಯಡಿಯೂರಪ್ಪನವರನ್ನು ನಮ್ಮ ಪಕ್ಷದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಅದನ್ನು ಹಲವು ಮುಖಂಡರು ಬಹಿರಂಗವಾಗಿಯೇ ವಿರೋಧಿಸಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)