ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಮಿಲ್‌ ಸ್ವಚ್ಛತೆ ಕಾಪಾಡಲು ಸಲಹೆ

ಗುಲಾಬಿ ಕಾಯಿಕೊರಕದ ಬಾಧೆ ತಡೆಯಲು ಕ್ರಮ
Last Updated 26 ಮೇ 2018, 13:01 IST
ಅಕ್ಷರ ಗಾತ್ರ

ನರಗುಂದ: ‘ಪಟ್ಟಣದ ಹತ್ತಿಯ ಜಿನ್ನಿಂಗ್ ಮಿಲ್‌ಗಳಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.

ಪಟ್ಟಣದ ವೆಂಕಟೇಶ್ವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಗುರುವಾರ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ತಡೆ
ಯುವ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಳಿಕೆಯಾದ ಹತ್ತಿ ಬೀಜಗಳು, ಕಸ ಕಡ್ಡಿಗಳು ಹಾಗೂ ಬಾರದಾನಗಳಲ್ಲಿ ಕಾಯಿ ಕೊರಕದ ಹುಳು ಸುಪ್ತಾವಸ್ಥೆಯಲ್ಲಿರುತ್ತದೆ. ಹಂಗಾಮು ಆರಂಭವಾಗಿ ಹೊಲದಲ್ಲಿ ಹತ್ತಿ ಬೆಳೆ ಬಂದ ಮೇಲೆ ಬೆಳೆಯನ್ನು ಬಾಧಿಸಲು ಆರಂಭಿಸುತ್ತದೆ. ಆದ್ದರಿಂದ ಜಿನ್ನಿಂಗ್‌ ಫ್ಯಾಕ್ಟರಿಗಳು ಉತ್ಪಾದನೆ ಮಾಡುತ್ತಿರಲಿ, ಇಲ್ಲವೇ ಸ್ಥಗಿತಗೊಂಡಿರಲಿ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಿಲ್‌ಗಳಲ್ಲಿ ಲಿಂಗಾಕರ್ಷಕ ಬಲೆಗಳನ್ನು ಕಟ್ಟಬೇಕು. 15–20 ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು. ರೈತರು ಕೂಡ ಖಾಲಿ ಹೊಲಗಳಲ್ಲಿ ಹತ್ತಿಗೆ ಸಂಬಂಧಿಸಿದ ಎಲ್ಲ ತ್ಯಾಜ್ಯಗಳನ್ನು ಸಂಗ್ರಹಿಸಿ ಸುಟ್ಟು ಸುರಕ್ಷಿತವಾಗಿ ಹಾಕಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವರ್ತಕರಾದ ಅಶೋಕ ಗುಡಿಸಾಗರ, ಸತೀಶ ಗುಡಿ ಸಾಗರ, ಅನಿಲಕುಮಾರ ಗುಡಿಸಾಗರ, ವೆಂಕಟೇಶ, ಗೋವಿಂದ ಇಂಗಳಳ್ಳಿ, ಕೃಷ್ಣಾ ಗುಡಿಸಾಗರ, ಜಗದೀಶ ನಂದಿ, ರೈತರಾದ ಮಲ್ಲೇಶಪ್ಪ ಚೊಳಚಗುಡ್ಡ, ನಿಂಗಪ್ಪ ಚೊಳಚಗುಡ್ಡ, ಹನುಮಂತ ಬೆನ್ನೂರ, ಲಕ್ಷ್ಮಣ ಮುನೇನಕೊಪ್ಪ, ಕಾಂತೇಶ ಹಟ್ಟಿ, ಮಹಮ್ಮದ್ ತಹಶೀ
ಲ್ದಾರ್, ಚನ್ನಬಸಪ್ಪ ಕೋಟಿ, ಎಸ್.ಎ.ಚಲವಾದಿ, ಶಿವಾಜಿ ಸಾಠೆ ಹಾಗೂ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT