ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐ.ಒ.ಟಿ.ಯಿಂದ ಮನುಷ್ಯನ ಬದುಕು ಸ್ಮಾರ್ಟ್‌’

Last Updated 2 ನವೆಂಬರ್ 2019, 15:25 IST
ಅಕ್ಷರ ಗಾತ್ರ

ಹೊಸಪೇಟೆ: ‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐ.ಒ.ಟಿ.) ತಂತ್ರಜ್ಞಾನವು ಮನುಷ್ಯನ ಬದುಕು ಬಹಳ ಸರಳ, ಸ್ಮಾರ್ಟ್‌ಗೊಳಿಸಿದೆ’ ಎಂದುಬೆಂಗಳೂರಿನ ರಾಜರಾಜೇಶ್ವರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಬಾಲಕೃಷ್ಣ ತಿಳಿಸಿದರು.

ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ವಿ.ಟಿ.ಯು. ಪ್ರಾಯೋಜಿತ ಟೆಕ್ಯುಪ್ 1.3 ಯೋಜನೆ ಅಡಿಯಲ್ಲಿ ‘ಇಂಟರ್‌ನೆಟ್ ಆಫ್ ಥಿಂಗ್ಸ್’ ವಿಷಯದ ಮೇಲೆ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಶನಿವಾರ ಉದ್ಘಾಟಿಸಿ ಮಾತನಾಡಿದರು.

‘ಐ.ಒ.ಟಿ. ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳಾಗಿವೆ. ಸ್ಮಾರ್ಟ್ ಹಾಸ್ಪಿಟಲ್, ಫಿಟ್ನೆಸ್ ಮಟ್ಟ ಗುರುತಿಸುವ ಕೈಗಡಿಯಾರ, ಸ್ಮಾರ್ಟ್ ಮನೆಗಳು, ಸ್ಮಾರ್ಟ್ ಕಾರ್‌ಗಳು, ಸ್ಮಾರ್ಟ್ ಬೈಕ್‌ಗಳು ಸರ್ವೇ ಸಾಮಾನ್ಯವಾಗಲಿವೆ. 2022ರ ವೇಳೆಗೆ 20 ಕೋಟಿ ಮನೆಗಳಲ್ಲಿ ಸ್ಮಾರ್ಟ್ ಸಾಧನಗಳು ಪ್ರವೇಶ ಮಾಡಲಿವೆ’ ಎಂದರು.

ಪ್ರಾಚಾರ್ಯ ಎಸ್‌.ಎಂ.ಶಶಿಧರ್‌ ಮಾತನಾಡಿ, ‘ಐ.ಒ.ಟಿ. ತಂತ್ರಜ್ಞಾನ ನಾಲ್ಕನೇ ತಲೆಮಾರಿನ ದೈನಂದಿನ ಜೀವನದ ಭಾಗವಾಗಿದೆ. ಮುಂದಿನ ದಿನಗಳಲ್ಲಿ ಅದರ ಬಳಕೆ ಹೆಚ್ಚಾಗಿದೆ’ ಎಂದು ಹೇಳಿದರು.

ಡೀನ್ ಡಾ.ಯು.ಎಂ.ರೋಹಿತ್,ಪಿ.ಡಿ.ಐ.ಟಿ. ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ಬೆಂಗಳೂರಿನ ಯು.ವಿ.ಸಿ.ಇ. ಪ್ರಾಧ್ಯಾಪಕ ಡಾ.ವೆಂಕಟೇಶ್, ಆಡಳಿತ ಮಂಡಳಿ ಸದಸ್ಯ ಎಕಾಮರೇಶ್ ತಾಂಡೂರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ವಸಂತಮ್ಮ, ಕಾರ್ಯಾಗಾರದ ಸಂಚಾಲಕ ಪ್ರೊ.ಕೆ. ಮಾಲತೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT