ಅಂಚಿನ ಸಮುದಾಯದ ಏಳಿಗೆಯಲ್ಲಿ ಬೆಳಕು ಕಾಣಿ: ಪ್ರೊ. ಸ.ಚಿ. ರಮೇಶ

ಶನಿವಾರ, ಏಪ್ರಿಲ್ 20, 2019
28 °C
ಹಂಪಿ ಕನ್ನಡ ವಿ.ವಿ., ಜಿಲ್ಲಾ ಕಾಂಗ್ರೆಸ್‌ನಿಂದ ಜಗಜೀವನರಾಂ ಜಯಂತಿ

ಅಂಚಿನ ಸಮುದಾಯದ ಏಳಿಗೆಯಲ್ಲಿ ಬೆಳಕು ಕಾಣಿ: ಪ್ರೊ. ಸ.ಚಿ. ರಮೇಶ

Published:
Updated:
Prajavani

ಹೊಸಪೇಟೆ: ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಶುಕ್ರವಾರ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಶೇಷ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಧಾರ್ಮಿಕ ವಿಚಾರಗಳ ಹಿನ್ನೆಲೆಯಲ್ಲಿ ವಿದ್ಯೆಯು ಬೆಂಕಿಯಾಗುವ ಅಪಾಯ ಇರುತ್ತದೆ. ಹಾಗಾಗು ನಾವು ಸುಡದ ಬೆಂಕಿಯನ್ನು ನೋಡಬೇಕು. ಆ ಮೂಲಕ ಅಂಚಿನ ಸಮುದಾಯದವರೆಲ್ಲರ ಏಳಿಗೆಯಲ್ಲಿ ಬೆಳಕು ಕಾಣಬೇಕು’ ಎಂದರು.

‘ಬಾಬು ಜಗಜೀವನರಾಂ ಅವರು ಸಾಮಾಜಿಕ ಸುಧಾರಣೆಯ ಜೊತೆಗೆ ಸಮಾಜದಲ್ಲಿ ಬದಲಾವಣೆ ಬಯಸಿದ್ದರು. ಅಂಚಿನ ಸಮುದಾಯದ ಜನರ ಬದುಕಿನ ಬದಲಾವಣೆಗೆ ಶ್ರಮಿಸಿದರು. ನುಡಿದಂತೆ ನಡೆದರು. ಇಂತಹ ಮಹಾನ್‍ ವ್ಯಕ್ತಿಗಳು ನಮಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳು ಇವರ ಜೀವನ ಚರಿತ್ರೆಯನ್ನು ಮತ್ತೆ ಮತ್ತೆ ಓದಬೇಕು. ಅಧ್ಯಯನಶೀಲರಾಗಬೇಕು. ಕೇವಲ ಒಬ್ಬರಿಂದ ಸಾಮಾಜಿಕ ಬದಲಾವಣೆ ಉಂಟಾಗುವುದಿಲ್ಲ. ಒಗ್ಗಟ್ಟಿನಿಂದ ಸಾಧ್ಯ’ ಎಂದು ಹೇಳಿದರು.

ಕುಲಸಚಿವ ಅಶೋಕಕುಮಾರ ರಂಜೇರೆ, ವಿಶೇಷ ಘಟಕದ ಸಂಯೋಜನಾಧಿಕಾರಿ ಎ.ವೆಂಕಟೇಶ, ಸಂಶೋಧನಾ ವಿದ್ಯಾರ್ಥಿಗಳಾದ ಚೌಡೇಶ, ಕೆ. ಮಂಜುನಾಥ, ಸಂಗೀತ ವಿದ್ಯಾರ್ಥಿ ನೀಲಕಂಠ,  ಅಶ್ವತ್ಥರಾಮ, ಕಲ್ಲೇಶ್ ಇದ್ದರು.

ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ

ನಗರದ ಪಕ್ಷದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಉಸ್ತುವಾರಿ ನಿಂಬಗಲ್‌ ರಾಮಕೃಷ್ಣ, ‘ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಬಾಬು ಜಗಜೀವನರಾಂ ಅವರು, ನಂತರ ಎ.ಐ.ಸಿ.ಸಿ. ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದರು. ರೈಲ್ವೆ, ಕೃಷಿ, ರಕ್ಷಣೆ, ಕಾರ್ಮಿಕ, ಸಂಪರ್ಕ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ಪ್ರಮುಖ ಖಾತೆಗಳ ಜವಾಬ್ದಾರಿ ನಿರ್ವಹಿಸಿ, ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು’ ಎಂದು ನೆನಪಿಸಿದರು.

ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ರಫೀಕ್, ಎಸ್ಸಿ ವಿಭಾಗದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಕೊಟಗಿನಾಳ್, ಎಂ.ಸಿ.ವೀರಸ್ವಾಮಿ, ತಮ್ಮನಳ್ಳೆಪ್ಪ, ಸಂದೀಪ್ ಸಿಂಗ್, ಎಚ್.ಎಸ್.ವೆಂಕಪ್ಪ, ಬಿ.ಮಾರೆಣ್ಣ, ಯರ್ರಿಸ್ವಾಮಿ, ಮೇಶಾಕ್ ಅಂಕಾಲಿ, ವೆಂಕಟರಮಣ, ಎಚ್.ದುರುಗಪ್ಪ, ಮಂಜುನಾಥ್, ವಿಜಯಕುಮಾರ್, ಗುಜ್ಜಲ ನಿಂಗಪ್ಪ, ಅಬ್ದುಲ್ ಖದೀರ್‌, ಮಲ್ಲಪ್ಪ, ರಾಮಾಂಜಿನಿ, ಎ. ಬಸವರಾಜ್, ಗೌಸ್,  ಧನಲಕ್ಷ್ಮಿ, ಚಿದಾನಂದಪ್ಪ, ಅಂಜಿನಿ, ರೂಪೇಶ್, ರವಿಕುಮಾರ್, ಮಲ್ಲಿಕಾರ್ಜುನ, ನೂರ್ ಜಹಾನ್, ಎನ್ .ವೆಂಕಟೇಶ್, ಗಣೇಶ್, ಪಾಂಡು, ಹೊನ್ನೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !