ಸುಮಲತಾ ಜೊತೆ‌ ಜೆಡಿಎಸ್-ಕಾಂಗ್ರೆಸ್ ದುರ್ವರ್ತನೆ ಅವರಿಗೆ ಮುಳುವಾಗಲಿದೆ:ಯಡಿಯೂರಪ್ಪ

ಶನಿವಾರ, ಏಪ್ರಿಲ್ 20, 2019
31 °C

ಸುಮಲತಾ ಜೊತೆ‌ ಜೆಡಿಎಸ್-ಕಾಂಗ್ರೆಸ್ ದುರ್ವರ್ತನೆ ಅವರಿಗೆ ಮುಳುವಾಗಲಿದೆ:ಯಡಿಯೂರಪ್ಪ

Published:
Updated:

ಬಳ್ಳಾರಿ:  ಮಂಡ್ಯದ ಪಕ್ಷೇತರ ಅಭ್ಯರ್ಥಿ‌ ಎ. ಸುಮಲತಾ ಅವರೊಂದಿಗೆ ಮೈತ್ರಿ‌ ಪಕ್ಷಗಳ ನಡೆದುಕೊಳ್ಳುತ್ತಿರುವ ರೀತಿ ಎರಡೂ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ‌ಉಪಾಧ್ಯಕ್ಷ ‌ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ‌ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ‌ಬದುಕಿದ್ದಾಗ ಹಾಡಿ ಹೊಗಳಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಂಬರೀಶ್ ಕೊಡುಗೆ ಏನು ಎಂದು ಈಗ ಕೇಳುತ್ತಿರುವುದನ್ನು ಮತದಾರರು ಗಮನಿಸಿದ್ದಾರೆ. ಇಡೀ ರಾಜ್ಯದಲ್ಲಿ‌ ಇದು ಪರಿಣಾಮ ಬೀರಲಿದೆ ಎಂದರು.

ಚುನಾವಣೆಗೂ‌ ಮುನ್ನವೇ  ಕುಮಾರಸ್ವಾಮಿಯವರಿಗೆ ಮಂಡ್ಯದಲ್ಲಿ ಸೋಲಿನ ಅನುಭವವಾಗಿರುವುದರಿಂದ ಅವರು ಆ ರೀತಿ‌ ವರ್ತಿಸುತ್ತಿದ್ದಾರೆ ಎಂದರು.

ಮಾಜಿ‌ ಪ್ರಧಾನಿಯಾಗಿದ್ದರೂ ಎಚ್. ಡಿ.ದೇವೇಗೌಡರಿಗೆ ಯಾವ ಕ್ಷೇತ್ರದಲ್ಲಿ ‌ಸ್ಪರ್ಧಿಸಬೇಕು ಎಂಬ ಪರಿಸ್ಥಿತಿ‌ ಬರಬಾರದಿತ್ತು. ಕೊನೆಗೆ ಅವರು ತುಮಕೂರಿನಲ್ಲಿ‌ ಸ್ಪರ್ಧಿಸಿದ್ದಾರೆ ಎಂದು ವಿಷಾದಿಸಿದರು.

ನನ್ನದೆಂದು ಹೇಳಲಾಗಿರುವ  ಡೈರಿಯಲ್ಲಿರುವ ವಿಷಯಗಳನ್ನು  ಎಐಸಿಸಿ ಅಧ್ಯಕ್ಷ‌ ರಾಹುಲ್ ಗಾಂಧಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ‌ಹೇಳಿದರು.

ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ‌ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗಿದೆ. ‌ದೇಶದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆಯಾಗಿದೆ. ಬಿಜೆಪಿ ದೇಶದಲ್ಲಿ ೩೦೦ ಹಾಗೂ ರಾಜ್ಯದಲ್ಲಿ ೨೨ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲ.‌ ಪಕ್ಷದ ಎಲ್ಲ ಮುಖಂಡರೂ ಪ್ರಚಾರ ನಡೆಸಲಿದ್ದಾರೆ. ಬಹಳ ‌ದೊಡ್ಡ  ಅಂತರದಲ್ಲಿಯೇ ಗೆಲ್ಲುತ್ತೇವೆ. ವಾತಾವರಣ ಬಿಜೆಪಿ ಪರವಾಗಿದೆ. ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ‌ಬೀರಲಿದೆ. ಮೈತ್ರಿ ಸರ್ಕಾರ ಬೀಳಲಿದೆ ಎಂದು‌ ಹೇಳಿದರು. 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !